ಗೋಕರ್ಣ(Gokarn) : ಇಲ್ಲಿನ ಕುಡ್ಲೆ ಕಡಲತೀರದಲ್ಲಿ(Kudle Beach) ಈಜುತ್ತ ಸುಳಿಗೆ ಸಿಲುಕಿದ ವಿದೇಶಿ ಮಹಿಳೆಯೋರ್ವಳನ್ನ ಲೈಫ್ ಗಾರ್ಡ್(life Guard) ಸಿಬ್ಬಂದಿಗಳು ರಕ್ಷಿಸಿದ್ದಾರೆ(Rescue).
ಫ್ರಾನ್ಸ್ (France) ದೇಶದ ದನಯ್ (73) ರಕ್ಷಣೆಗೊಳಗಾದ ಮಹಿಳೆ. ಗೋಕರ್ಣದ ಕುಡ್ಲೆ ಸಮುದ್ರದಲ್ಲಿ(Gokarn Kudle Beach) ಈಜಾಡುವಾಗ ಸುಳಿಗೆ ಸಿಕ್ಕಿ ಕೂಗುತ್ತಿದ್ದಳು. ಅದನ್ನು ಗಮನಿಸಿದ ಜೀವರಕ್ಷಕ(Life Guard) ಸಿಬ್ಬಂದಿಗಳಾದ ನಾಗೇಂದ್ರ ಎಸ್ ಕುರ್ಲೆ, ಪ್ರದೀಪ ಬಿ. ಅಂಬಿಗ, ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಹಾಗೂ ಮೈಸ್ಟಿಕ್ ಸಿಬ್ಬಂದಿ ತಕ್ಷಣ ಧಾವಿಸಿ ಜೆಸ್ಕಿ ಮೂಲಕ ತೆರಳಿ ಇವರನ್ನು ರಕ್ಷಿಸಿದ್ದಾರೆ.
ಗೋಕರ್ಣ ಪೊಲೀಸ್ ಠಾಣಾ(Gokarn Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಮುರ್ಡೇಶ್ವರ ಕಡಲತೀರದಲ್ಲಿ(Murdeshwar Beach) ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಸುದ್ದಿ ಮಾಸುವ ಮುನ್ನವೇ ಇಲ್ಲಿ ಘಟನೆ ನಡೆದಿರುವುದು ಆತಂಕ ಹೆಚ್ಚು ಮಾಡಿದೆ.
ಇದನ್ನು ಓದಿ : ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು.
ವಿಶ್ವಕ್ಕೆ ಚೆಸ್ ಸಾಮ್ರಾಟನಾದ ಗುಕೇಶ್.