ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮುರ್ಡೇಶ್ವರದ ಯಮುನಾ ನಾಯ್ಕ(Murdeshwar Yamuna Naik) ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಕೋರ್ಟ್ ಆದೇಶದಂತೆ ಶೀಘ್ರ ಮುಗಿಸಲು ಒತ್ತಾಯಿಸಿ ಶ್ರೀರಾಮ ಸೇನೆ(Shriram Sene) ಕಾರ್ಯಕರ್ತರು ಆಗ್ರಹಿಸಿದ್ದಾರೆ.
2010 ಅಕ್ಟೋಬರ 23 ಕ್ಕೆ ಯಮುನಾ ನಾಯ್ಕ ಅತ್ಯಾಚಾರ ಹಾಗೂ ಕೊಲೆಯ ಭೀಕರ ಪ್ರಕರಣ ನಡೆದಿತ್ತು. ಪ್ರಕರಣದಲ್ಲಿ ಪೊಲೀಸರು ಅಮಾಯಕ ವೆಂಕಟೇಶ ಹರಿಕಾಂತನನ್ನು ಬಂಧಿಸಿ ಬಂಧನದಲ್ಲಿ ಇರಿಸಿದ್ದರು. ಬಳಿಕ ನಡೆದ ವಿಚಾರಣೆಯಲ್ಲಿ ವೆಂಕಟೇಶ ನಿರಪರಾಧಿ ಎಂದು 2017 ರಲ್ಲಿ ಹೈಕೋರ್ಟ್ ಆದೇಶದಂತೆ(High court Order) ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಈ ಪ್ರಕರಣದ ಮರುತನಿಖೆಗೆ ಆದೇಶಿಸಲಾಗಿತ್ತು.
ಇದೀಗ ಏಳು ವರ್ಷ ಕಳೆದರೂ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಬಂಧನವಾಗದಿರುವುದು ದುರ್ದೈವ ಸಂಗತಿಯಾಗಿದೆ. ಇವರೆಗೂ ನೊಂದ ಕುಟುಂಬಕ್ಕೆ ನ್ಯಾಯ ಸಿಗುವುದು ವಿಳಂಭವಾಗುತ್ತಿರುವುದರಿಂದ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಅತ್ಯಾಚಾರಿ, ಕೊಲೆ ಪಾತಕರಿಗೆ ಕಾನೂನಿನ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ.
ಹೀಗಾಗಿ ತನಿಖೆ ಚುರುಕುಗೊಳಿಸಿ ತಕ್ಷಣ ಅತ್ಯಾಚಾರ, ಕೊಲೆ ಮಾಡಿದ ಪಾಪಿಗಳಿಗೆ ಉಗ್ರ ಶಿಕ್ಷೆಯಾಗಬೇಕೆಂದು ಶ್ರೀರಾಮ ಸೇನಾ ಭಟ್ಕಳದ ಕಾರ್ಯಕರ್ತರು(Bhatkal Workers) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಆಗ್ರಹಿಸಿದ್ದಾರೆ. ಈ ಬಗ್ಗೆ ಭಟ್ಕಳ ಡಿವೈಎಸ್ಪಿ ಮಹೇಶ ಎಂ ಕೆ ಅವರನ್ನು ಭೇಟಿಯಾಗಿ ತನಿಖೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಕರಣದಲ್ಲಿ ನಾಲ್ವರ ವೀರ್ಯ ಮಾದರಿ ಸಂಗ್ರಹಿಸಿದ್ದು ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆಂದು ಡಿವೈಎಸ್ಪಿ ತಿಳಿಸಿದ್ದಾರೆಂದು ಶ್ರೀರಾಮ ಸೇನೆ ಮುಖಂಡ ಜಯಂತ ನಾಯ್ಕ ಮಾದ್ಯಮಗಳಿಗೆ ಹೇಳಿದ್ದಾರೆ.
ಇದನ್ನು ಓದಿ : ಬಿರುಗಾಳಿಗೆ ಮರ ಬಿದ್ದು ಬೈಕ್ಗಳು ಜಖಂ – ಆಕಳು ಸಾವು
ಬಸ್ ಗೆ ಹಿಂಬದಿಯಿಂದ ಬೈಕ್ ಢಿಕ್ಕಿ. 20 ಪ್ರಯಾಣಿಕರ ದುರ್ಮರಣ.
69 ವರ್ಷದ ಸತ್ತ ವ್ಯಕ್ತಿ ಚಿತೆಯಲ್ಲಿ ಎದ್ದ. ವೈದ್ಯಕೀಯ ಲೋಕದಲ್ಲಿ ಮತ್ತೊಂದು ಅಚ್ಚರಿಯ ಘಟನೆ.

