ಯಲ್ಲಾಪುರ(YALLAPUR) : ಜಿಲ್ಲೆಯಲ್ಲಿ ಕರಡಿಗಳ ಆತಂಕ ಹೆಚ್ಚಾಗಿದೆ. ಜಮೀನಿಗೆ ಬೇಲಿ ಹಾಕುವ ವೇಳೆ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿದ ಘಟನೆ ತಾಲೂಕಿನ ಕಿರವತ್ತಿಯ ಕಂಚನಳ್ಳಿ ಗ್ರಾಮದ ಮುಂಡವಾಡದಲ್ಲಿ ನಡೆದಿದೆ.
ಘಟನೆಯಲ್ಲಿ ಪರಶುರಾಮ ದುಗ್ಗಾ ನಾಯ್ಕ (54) ಎಂಬಾತ ತೀವ್ರ ಗಾಯಗೊಂಡಿದ್ದಾನೆ. ಪರಶುರಾಮ್ ತನ್ನ ಜಮೀನನ್ನ ರಕ್ಷಿಸಿಕೊಳ್ಳಲು ಶುಕ್ರವಾರ ಬೇಲಿ ಹಾಕುತ್ತಿದ್ದರು. ಈ ವೇಳೆಯೇ ಕರಡಿಯೊಂದು ಹಠಾತ್ ದಾಳಿ ನಡೆಸಿದೆ. ದಾಳಿ ನಡೆಸಿದ ಕರಡಿಯನ್ನ ಎದುರಿಸಲಾಗದೆ ಕೂಗಿಕೊಂಡಾಗ ಸ್ಥಳೀಯರು ಓಡಿ ಬಂದಿದ್ದಾರೆ.
ಘಟನೆಯಲ್ಲಿ ಅವರ ತಲೆ, ಮುಖ ಮತ್ತು ದೇಹದಲ್ಲಿ ತೀವ್ರತರದ ಗಾಯವಾಗಿದೆ. ಗಾಯಗೊಂಡ ಅವರನ್ನು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣಾ(YALLAPUR POLICE STATION) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಕೆರೆಗೆ ಮೀನು ಬಿಡುವ ಮೂಲಕ ವಿನೂತನ ಶೃದ್ಧಾಂಜಲಿ.
ಯುರೋಪಿನಲ್ಲಿ ರಾಷ್ಟ್ರಗೀತೆ ಮೊಳಗಿಸಿದ ಪೋರಿ