ಭಟ್ಕಳ : ರೈಲ್ವೆ ಸ್ಟೇಷನ್ ನಲ್ಲಿದ್ದ ವ್ಯಕ್ತಿಯೋರ್ವ ಕ್ಷಣಾರ್ಧದಲ್ಲಿ ಕೈ ಕಳೆದುಕೊಂಡ ಘಟನೆ ಬುಧವಾರ ನಡೆದಿದೆ.

ಮುರ್ಡೇಶ್ವರದಿಂದ ಬೆಂಗಳೂರು (MURDESHWAR-BANGALORE) ಕಡೆ ತೆರಳುತ್ತಿದ್ದ ಎಕ್ಸಪ್ರೆಸ್  ರೈಲಿಗೆ ಸಿಲುಕಿ  ಘಟನೆ ಸಂಭವಿಸಿದೆ. ದೇವಿದಾಸ ಮೊಗೇರ ಎಂಬಾತನೆ ತನ್ನ ಬಲಗೈ ಕಳೆದುಕೊಂಡವ. ಈತ ಭಟ್ಕಳ (BHATKAL) ತಾಲೂಕಿನ ತೆಂಗಿನಗುಂಡಿ ನಿವಾಸಿ ಎಂದು ತಿಳಿದು ಬಂದಿದೆ.

ಸ್ಥಳೀಯರು ಹೇಳುವ ಪ್ರಕಾರ ಈತ ಹಲವು ಸಮಯದವರೆಗೆ ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ.  ಆದರೆ ಅಷ್ಟು ಹೊತ್ತಿನವರೆಗೆ ರೈಲ್ವೆ ಪೊಲೀಸರು ಏನು ಮಾಡುತ್ತಿದ್ದರು. ಯಾಕೆ ಆತ ಅಲ್ಲಿ ಬಹು ಹೊತ್ತಿನವರೆಗೆ ಇದ್ದ ಎಂಬುದರ ಬಗ್ಗೆ ಜನ ಮಾತಾಡಿಕೊಳ್ಳುತ್ತಿದ್ದಾರೆ.

ತೀವ್ರ ಗಾಯಗೊಂಡ ಆತನನ್ನ ಸ್ಥಳೀಯರು  ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿನಲ್ಲಿ ದಾಖಲಿಸಲಾಗಿದೆ.