ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಮುರ್ಡೇಶ್ವರ (Murdeshwar):  ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸವಾರನೊಬ್ಬನಿಗೆ ನಾಲ್ವರು ಮಂಗಳಮುಖಿಯರು (Transgender)  ಹಲ್ಲೆ ಮಾಡಿ  ಚಿನ್ನದ ಸರ ದೋಚಿದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದ ರೈಲ್ವೆ ಸ್ಟೇಷನ್‌(Murdeshwar Railway Station) ಬಳಿ ನಡೆದಿದೆ.

ಮಾವಳ್ಳಿ ಗುಮ್ಮನಕಲ್ ನಿವಾಸಿ  ಅರುಣಕುಮಾರ್  ಭಾಸ್ಕರ ನಾಯ್ಕಎಂಬುವವರೇ ಮಂಗಳಮುಖಿಯರ ದೌರ್ಜನ್ಯಕ್ಕೆ(Transgender Violence) ಒಳಗಾದವರು. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಪೆಟ್ರೋಲ್ ಬಂಕ್‌ನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರ(NH 66) ಸರ್ವಿಸ್ ರಸ್ತೆಯ ಮೂಲಕ ತೆರಳುತ್ತಿದ್ದರು. ಈ ವೇಳೆ ಎದುರಾದ ಇಬ್ಬರು ಮಂಗಳಮುಖಿಯರು ಸ್ಕೂಟರ್ ಅಡ್ಡಗಟ್ಟಿ ಮಾತುಕತೆ ಆರಂಭಿಸಿದರು. ಆಗಲೇ ಇನ್ನಿಬ್ಬರು ಮಹಿಳೆಯರು ಸ್ಥಳಕ್ಕೆ ಬಂದಿದ್ದಾರೆ.

ಎಲ್ಲರೂ ಸೇರಿ ಮಾತನಾಡುವ ನೆಪದಲ್ಲಿ ಅಸಭ್ಯ ವರ್ತನೆ ತೋರಿದರು. ಹಲ್ಲೆಗೆ ಮುಂದಾದರು. ಅರುಣಕುಮಾ‌ರ್ ಅವರ ಕುತ್ತಿಗೆಯಲ್ಲಿದ್ದ ಸುಮಾರು ಲಕ್ಷ ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ (Murdeshwar Police Station) ಪ್ರಕರಣ ದಾಖಲಾಗಿದೆ.  ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ವಿದ್ಯುತ್ ಶಾಕ್ ಗೆ ಜೋಡಿಯಾನೆ ಬಲಿ. ಜಮೀನು ಮಾಲೀಕನ ಮೇಲೆ ಪ್ರಕರಣ.

ಸಿಗ್ನಲ್ ಮೀರಿ ಬಂದ ಅಂಬುಲೆನ್ಸ್. ಭಟ್ಕಳದ ದಂಪತಿ ದುರ್ಮರಣ. ಮಕ್ಕಳು ಅನಾಥ.

ಒಂದೇ ದಿನ ಇಬ್ಬರು ಮಹಿಳಾ ಜನಪ್ರತಿನಿಧಿಗಳು ಹೃದಯಾಘಾತದಿಂದ  ಸಾವು.