ಭಟ್ಕಳ(BHATKAL) : ತಾಲೂಕಿನ ಜಾಲಿಯಲ್ಲಿ ಗೋವು ಕಳ್ಳತನ ಮಾಡಿದ ಗೋ ಗಳ್ಳರಿಗೆ ಹೆಡೆಮುರಿ ಕಟ್ಟುವಲ್ಲಿ ಭಟ್ಕಳ ಪೊಲೀಸರು(Bhatkal Police ) ಯಶಸ್ವಿಯಾಗಿದ್ದಾರೆ.

ಪಡುಬಿದ್ರೆ ಮೂಲದ ಜಬ್ಬಾರ ಹುಸೇನ್  ಮಯದ್ದಿ ಬ್ಯಾರಿ (37), ಜಲೀಲ್ ಹುಸೇನ್ ಪಿ ಕೆ ಮಯದ್ದಿ (39), ಭಟ್ಕಳ ಜಾಮಿಯಾಬಾದ್ ನ ಮಹ್ಮದ್ ಹನೀಪ್ ಮೋಹಿದ್ದಿನ್ ಅಬ್ದುಲ್ ಖಾದರ್ (27) ಬಂಧಿತರು.

ಅಕ್ಟೋಬರ್ 18 ರಂದು ಬೆಳಿಗ್ಗೆ 3-15ಕ್ಕೆ ಜಾಲಿಯಲ್ಲಿ ಜಾನುವಾರು ಕಳ್ಳತನ ನಡೆಸಲಾಗಿತ್ತು. ಕಳ್ಳತನದ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿತ್ತು.  ಕೃತ್ಯಕ್ಕೆ ಭಟ್ಕಳದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಕಳ್ಳರನ್ನ ಬಂಧಿಸುವಂತೆ ಸ್ಥಳೀಯರು ಹಾಗೂ ತಂಜಿಮ್ ಸಂಸ್ಥೆ ಪೊಲೀಸ್ ಇಲಾಖೆಯನ್ನ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ  ಭಟ್ಕಳ ಶಹರ ಠಾಣೆ ಸಿಪಿಐ ಗೋಪಿಕೃಷ್ಣ, ಪಿಎಸ್ಐ ಸೋಮನಾಥ್ ರಾಠೋಡ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಭಟ್ಕಳದ ಗೋವು ಕಳ್ಳತನ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಮನೆ ಮುಂದೆ, ಬೀದಿ ಬದಿಯಲ್ಲಿ ಮಲಗಿರುವ ಜಾನುವಾರುಗಳನ್ನ ಕದ್ದು (Cattle theft) ಆಸಾಮಿಗಳು ಜಿಲ್ಲೆ ಮತ್ತು ಹೊರ ಜಿಲ್ಲೆಯ ಕಸಾಯಿಖಾನೆಗೆ ಮಾರುತ್ತಿದ್ದರೆನ್ನಲಾಗಿದೆ. ಭಟ್ಕಳ ನಗರ ಠಾಣೆ (Bhatkal town station)ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ಗೋ ಗಳ್ಳರು, ತಡೆಯೋರು ಯಾರು ?

ಬಟ್ಟೆ ಪ್ಯಾನ್ಸಿ ಅಂಗಡಿಯಲ್ಲಿ ಮಹಿಳೆಯರ ಕಳ್ಳತನದ ಕಾಟ

ಬಾರೀ ಮಳೆಯಿಂದ ತತ್ತರಿಸಿದ ಶಿರಸಿ

ಭಟ್ಕಳದಲ್ಲಿ ಆರ್ ಎಸ್ಎ ಸ್ ಪಥಸಂಚಲನ ಸಂಗಮ