ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡ(Mundgod) : ಅನೇಕ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡು ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ತಲೆನೋವಾಗಿದ್ದ ವ್ಯಕ್ತಿಯೋರ್ವನನ್ನು ಗಡಿಪಾರು(Exile) ಮಾಡಲಾಗಿದೆ.
ಮುಂಡಗೋಡದ(Mundgod) ಕಿರಣ್ ಸಾಳುಂಕೆ ಕೊನೆಗೂ ಕಾನೂನಿನ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಸಾಮಾಜಿಕ ಶಾಂತಿ ಮತ್ತು ಸಾರ್ವಜನಿಕ ಸ್ವಾಸ್ಥ್ಯ ಕದಡಬಾರದು ಎಂಬ ಉದ್ದೇಶದಿಂದ ಶಿರಸಿ ಸಹಾಯಕ ಆಯುಕ್ತ ಕಾವ್ಯಾರಾಣಿ(Sirsi AC Kavyarani) ಅವರು ಧೈರ್ಯಶಾಲಿ ಕ್ರಮ ಕೈಗೊಂಡು ಕಿರಣ್ ಸಾಳುಂಕೆಯನ್ನು ಮೂರು ತಿಂಗಳವರೆಗೆ ಯಾದಗಿರಿ ಜಿಲ್ಲೆಗೆ(Yadagiri District) ಗಡಿಪಾರು ಮಾಡಿ ಆದೇಶಿಸಿದ್ದಾರೆ(Exile Order).
ಮುಂಡಗೋಡ ಪಿಐ(Mundgod PI) ರಂಗನಾಥ್ ನೀಲಮ್ಮನವರ್ ಅವರ ಶಿಫಾರಸಿನ ಮೇರೆಗೆ ಎಸಿ ಕೋರ್ಟ್‌ನಲ್ಲಿ(AC Court) ವಿಚಾರಣೆ ನಡೆಸಿ ತಕ್ಷಣದಿಂದಲೇ ಜಾರಿಯಾಗುವಂತೆ ಆದೇಶ ಮಾಡಲಾಗಿದೆ.
ಮುಂಡಗೋಡು ಪಟ್ಟಣದ(Mundgod Town) ಇಂದಿರಾನಗರದ(Indiranagar) ನಿವಾಸಿಯಾದ ಕಿರಣ್ ಸಾಳುಂಕೆ ಕಳೆದ ಕೆಲ ವರ್ಷದಿಂದ ಅನೇಕ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಈತನ ನಡವಳಿಕೆ ಸಾರ್ವಜನಿಕ ಅಶಾಂತಿಗೆ ಕಾರಣವಾಗಿತ್ತು. ಹೀಗಾಗಿ ಆದೇಶ ಹೊರಬಂದ ಕೂಡಲೇ ಮುಂಡಗೋಡ ಪೊಲೀಸರು(Mundgod Police) ಕಿರಣ್ ಸಾಳುಂಕೆಯನ್ನು ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಯಾದಗಿರಿ ಜಿಲ್ಲೆಗೆ ರವಾನಿಸಿದರು.
ಇದನ್ನು ಓದಿ : ಕೈಗಾದಿಂದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರ ಟೆಂಪೋ ಪಲ್ಟಿ. ಹಲವರಿಗೆ ಗಾಯ. 
45 ವರ್ಷವಾದರೂ ಮದುವೆಯಾಗಿಲ್ಲ. ಚಾಕು ಇರಿದುಕೊಂಡ ಆತ್ಮತ್ಯೆಗೆ ಯತ್ನಿಸಿದ ಕಾರವಾರದ ವ್ಯಕ್ತಿ.
ಮುರ್ಡೇಶ್ವರದಲ್ಲಿ ಮಂಗಳಮುಖಿಯರ ದೌರ್ಜನ್ಯ. ಬೈಕ್ ಸವಾರನ ಸರ ಕಿತ್ತು ಪರಾರಿ.
ವಿದ್ಯುತ್ ಶಾಕ್ ಗೆ ಜೋಡಿಯಾನೆ ಬಲಿ. ಜಮೀನು ಮಾಲೀಕನ ಮೇಲೆ ಪ್ರಕರಣ.
ಸಿಗ್ನಲ್ ಮೀರಿ ಬಂದ ಅಂಬುಲೆನ್ಸ್. ಭಟ್ಕಳದ ದಂಪತಿ ದುರ್ಮರಣ. ಮಕ್ಕಳು ಅನಾಥ.
	
						
							
			
			
			
			
