ಭಟ್ಕಳ(BHATKAL) : ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಕಾಲೇಜು ವಾಹನ ಚಾಲಕನೋರ್ವ ಸುಖಾಸುಮ್ಮನೆ ಹಲ್ಲೆ ಮಾಡಿದ ಘಟನೆ ಭಟ್ಕಳ ಶಂಸುದ್ದೀನ್ ಸರ್ಕಲ್ ಸಮೀಪ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಬಿಜೆಪಿ(BJP) ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ   ಮೂಡಭಟ್ಕಳ ನಿವಾಸಿ ರಾಘವೇಂದ್ರ ರಾಮಚಂದ್ರ ನಾಯ್ಕ (36) ಆಗಿದ್ದಾರೆ.  ಸೋಮವಾರ ಮಧ್ಯಾಹ್ನ  ವೈಯಕ್ತಿಕ ಕೆಲಸ ನಿಮಿತ್ತ ಕಾರವಾರದಿಂದ ಕಾರಿನ ಮೂಲಕ ಬಂದಿದ್ದರು. ಭಟ್ಕಳ ಶಂಸುದ್ದೀನ್ ಸರ್ಕಲ್ ಬಳಿ ಇಳಿದು ಕೋಲಾ ಪ್ಯಾರಡೈಸ್ ಸಮೀಪವಿದ್ದ ನನ್ನ ಕೇಬಲ್‌ ಕಚೇರಿಗೆ ಹೋಗಲು ರಸ್ತೆ ದಾಟುತ್ತಿದ್ದದ್ದಾಗ  ಕೋಲಾ ಪ್ಯಾರಡೈಸ್ ರಸ್ತೆ ಬದಿಯಿಂದ ಬಂದ ಕಾಲೇಜಿನ ವಾಹನ ಅತಿವೇಗವಾಗಿ ನನ್ನ ಮೇಲೆ ಬಂತು.  ನಾನು ರಸ್ತೆ ಪಕ್ಕದಲ್ಲಿ ಬಿದ್ದಿದ್ದೇನೆ. ಆಗ ಚಾಲಕನಿಗೆ  ಪ್ರಶ್ನೆ ಮಾಡಿದಾಗ, ವಾಹನ ಚಾಲಕ ಬಸ್ ಅನ್ನು ಅಲ್ಲೇ ಮುಂದೆ ನಿಲ್ಲಿಸಿ ಬಂದು ನನ್ನ ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದದಿಂದ ಬೈದಿದ್ದಾನೆ. ನನ್ನನ್ನು ಮತ್ತೆ ರಸ್ತೆ ಮೇಲೆ ತಳ್ಳಿ ಕಾಲಿನಿಂದ ಒದ್ದಿದ್ದಾನೆ. ಅಲ್ಲದೇ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಅಲ್ಲೇ ಸಮೀಪ ಕರ್ತವ್ಯ ನಿರತ ಪೊಲೀಸರು ಸ್ಥಳಕ್ಕೆ ಬರುತ್ತಿರುವುದನ್ನು ನೋಡಿ ವಾಹನ ಚಾಲಕ ಓಡಿ ಹೋಗಿದ್ದಾನೆ. ನಂತರ ನನ್ನ ಸ್ನೇಹಿತರು ನನ್ನ ನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹಲ್ಲೆಗೊಳಗಾದ ರಾಘವೇಂದ್ರ ನಾಯ್ಕ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಕಾಲೇಜು ವಾಹನ ಚಾಲಕನನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ  ಮುಂದಿನ ಕ್ರಮಕೈಗೊಂಡಿದ್ದಾರೆ

ಗಾಯಗೊಂಡ ರಾಘವೇಂದ್ರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೂ ಮುಖಂಡ ಗೋವಿಂದ ನಾಯ್ಕ ಹಾಗೂ ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ರಾಘವೇಂದ್ರ ನಾಯ್ಕರ ಯೋಗ ಕ್ಷೇಮ ವಿಚಾರಿಸಿದ್ದಾರೆ.

ಇದನ್ನು ಓದಿ : ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಕೊಲೆ

ದೇಶಪಾಂಡೆ ಸಿಎಂ ಆದ್ರೆ ಖುಷಿ. ಆದ್ರೆ …

ಬೇಟೆಗೆ ಬಂದು ಸಾವು ತಂದುಕೊಂಡ ಚಿರತೆ

ಭಟ್ಕಳದಲ್ಲಿ ಹೋಟೆಲ್ ಮೇಲೆ ಪೋಲೀಸರ ದಾಳಿ