ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಸಾಗರ(Sagar) : ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆಯಾದ ಘಟನೆ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಗಿಣಿವಾರದ ರಾಜು(28), ಹುಲಿದೇವರ ಬನದ ಸಂದೀಪ್ ಭಟ್(35), ಸಿಗಂದೂರಿನ ಚೇತನ್(30) ನಾಪತ್ತೆಯಾದ ದುರ್ದೈವಿಗಳಾಗಿದ್ದಾರೆ. ತೆಪ್ಪದಲ್ಲಿ ಒಟ್ಟು ಐದು ಯುವಕರು ತೆರಳುತ್ತಿದ್ದರು. ವಿನಯ್, ಯಶ್ವಂತ್ ನೀರಿನಲ್ಲಿ ಈಜಿಕೊಂಡು ಬಚಾವಾಗಿದ್ದರು.
ಈ ಐವರು ಹೊಳೆಬಾಗಿಲಿನ ಕಡೆಯಿಂದ ಹೊಳೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಾಸ್ ಬರುತ್ತಿದ್ದಾಗ ಅವಘಡ ಸಂಭವಿಸಿದೆ.
ಕಣ್ಮರೆಯಾಗಿರುವ ಯುವಕರಿಗಾಗಿ ನಿನ್ನೆಯಿಂದ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ಮತ್ತು ಸ್ಥಳೀಯರು ಶೋಧ ನಡೆಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಬೇಲೆಕೇರಿ ಪ್ರಕರಣ. ಶಾಸಕ ಸತೀಶ್ ಸೈಲ್ ಗೆ ಜಾಮೀನು.
ಭಟ್ಕಳದಲ್ಲಿ ಸಿಡಿದೆದ್ದ ಕಾರ್ಮಿಕರು