ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮನೆ ಬಳಕೆಯ  ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇವೆಂದು ಜನರನ್ನು ನಂಬಿಸಿ ನೂರಾರು ಗ್ರಾಹಕರಿಂದ ಕೊಟ್ಯಾಂತರ ರೂಪಾಯಿ ಮುಂಗಡ ಹಣ ಪಡೆದು ವಸ್ತು ನೀಡದೆ ಪಂಗನಾಮ(Cheating) ಹಾಕಿ ಪರಾರಿಯಾದ ಘಟನೆ ಭಟ್ಕಳದಲ್ಲಿ ವರದಿಯಾಗಿದೆ(Bhatkal Report).

ತಿಂಗಳ ಹಿಂದಷ್ಟೆ ಭಟ್ಕಳ ಪುರಸಭೆ ವ್ಯಾಪ್ತಿಯ ಕಾರ್‌ಸ್ಟ್ರೀಟ್(Bhatkal Car Street ) ಪ್ರದೇಶದ ಕಟ್ಟಡವೊಂದರಲ್ಲಿ ‘ಗ್ಲೋಬಲ್ ಇಂಟರ್ನ್ಯಾಷನಲ್’(Global International) ಎಂಬ ಹೆಸರಿನಲ್ಲಿ ಅಂಗಡಿ ಆರಂಭಿಸಿದ್ದ ತಮಿಳುನಾಡು ಮೂಲದ(Tamilunadu Native) ಉದಯಕುಮಾರ್ ರೇಂಗರಾಜು ಎಂಬಾತ ಇತರರೊಂದಿಗೆ ಸೇರಿ  ಈಗ ಓಡಿ ಹೋಗಿದ್ದಾನೆ.

ಅಂಗಡಿಯಲ್ಲಿ “ಅರ್ಧ ಬೆಲೆಯ ಆಫರ್” ಎಂಬ ಪ್ರಚಾರ ಮಾಡಿ ಜನರನ್ನು ಸೆಳೆದಿದ್ದ. ವಸ್ತುಗಳ  ಬುಕ್ಕಿಂಗ್‌ಗಾಗಿ ಗ್ರಾಹಕರಿಂದ ನಿಗದಿತ ಬೆಲೆಯ ಅರ್ಧ ಮೊತ್ತವನ್ನು ಮುಂಗಡವಾಗಿ ಪಡೆದು ಬುಕ್ಕಿಂಗ್‌ ರಸೀದಿ ನೀಡುತ್ತಿದ್ದುದರಿಂದ ಜನರು ನಂಬಿದ್ದರು. ಆದರೆ ಕಳೆದ ರಾತ್ರಿ ಅಂಗಡಿ ಬಾಗಿಲು ಮುಚ್ಚಿ(Shop Door Closed) ಮಾಲೀಕ ಪರಾರಿಯಾಗಿರುವುದು ಗೊತ್ತಾಗಿದೆ.

ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಗ್ರಾಹಕರು ಬಾಗಿಲು ಮುಚ್ಚಿರುವುದನ್ನು ಕಂಡು ಕೆರಳಿ ಕೆಂಡವಾಗಿದ್ದಾರೆ. ಅಂಗಡಿ ಬಾಗಿಲು ತೆಗೆದು ಒಳನುಗ್ಗಿ ಸಿಕ್ಕಷ್ಟು ವಸ್ತುಗಳನ್ನ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಸುಮಾರು 500 ಕ್ಕೂ ಹೆಚ್ಚು ಜನರು ಮೋಸಕ್ಕೆ ಒಳಗಾಗಿದ್ದಾರೆ. ವಂಚನೆಯ ಮೊತ್ತ ಕೋಟ್ಯಾಂತರ  ರೂಪಾಯಿಗಳಷ್ಟಾಗಬಹುದು ಎಂದು ಹೇಳಲಾಗುತ್ತಿದೆ.

ಗ್ರಾಹಕರು ಅಂಗಡಿಗೆ ನುಗ್ಗಿದಾಗ ಪೊಲೀಸರು ‌ಸ್ಥಳಕ್ಕಾಗಮಿಸಿ  ಪರಿಸ್ಥಿತಿ ನಿಭಾಯಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ಹಣ ಹಿಂತಿರುಗಿಸುವಂತೆ ಆಗ್ರಹಿಸಿದ್ದಾರೆ.

ಮೋಸದ ಸುಳಿವು(Cheating Clue) ನೀಡಿದರೂಪೊಲೀಸರಿಂದ ನಿರ್ಲಕ್ಷ್ಯ :  ಈ ‘ಗ್ಲೋಬಲ್ ಇಂಟರ್ನ್ಯಾಷನಲ್’ ಎಂಬ ಮೋಸದ ಜಾಲದ ಬಗ್ಗೆ   ಸ್ಥಳೀಯ ವ್ಯಾಪಾರಿ ಸನಾವುಲ್ಲ ಗವಾಯಿ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ನಗರ ಪೊಲೀಸ್ ಠಾಣೆಗೆ(Town Police Station) ದೂರು ಸಲ್ಲಿಸಿದ್ದರು.

ಗ್ಲೋಬಲ್ ಇಂಟರ್ನ್ಯಾಷನಲ್(Global International) ಅಂಗಡಿ ಮಾಲೀಕರು ಮೊದಲು ಮುಂಗಡ ಹಣವನ್ನು ಪಡೆದು “ಎರಡು ವಾರಗಳೊಳಗೆ ವಸ್ತು ನೀಡುತ್ತೇವೆ” ಎಂದು ಹೇಳುತ್ತಿದ್ದು, ಅತೀ ಕಡಿಮೆ ಬೆಲೆಯ ಆಫರ್ ಮೂಲಕ ಜನರನ್ನು ಮೋಸ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಅವರು ಎಚ್ಚರಿಸಿದ್ದರು.  ತಕ್ಷಣ  ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದರು. ಆದರೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.   ಅಂಗಡಿ ಮಾಲೀಕ ಈಗ ಧಿಡೀರನೆ  ಪರಾರಿಯಾಗಿರುವುದು   ಗ್ರಾಹಕರು ಮೋಸ ಹೋಗಿದ್ದಾರೆ.

ಸದ್ಯ ಭಟ್ಕಳ  ಪೊಲೀಸರು ತನಿಖೆ(Bhatkal Police Investigation) ಆರಂಭಿಸಿದ್ದು, ಪರಾರಿಯಾದ ಅಂಗಡಿ ಮಾಲೀಕನಿಗಾಗಿ ಶೋಧ ನಡೆಸಲಾಗಿದೆ. ಈ ಹಿಂದೆ ಕೂಡ ಕಾರವಾರದಲ್ಲಿ ಇಂಥದ್ದೆ ಮೋಸದ ಜಾಲ ಬಯಲಿಗೆ ಬಂದಿದ್ದು, ಇದೀಗ ಭಟ್ಕಳ ಗ್ರಾಹಕರು  ಮಕ್ಮಲ್ ಟೋಪಿ ಹಾಕಿಕೊಂಡಿದ್ದಾರೆ.

ಇದನ್ನು ಓದಿ : ಯುಟ್ಯೂಬರ್ ಮುಕಳೆಪ್ಪ ಕೊಟ್ಟ ಕಷಾಯ ಹಿನ್ನಲೆ. ಉಪನೋಂದಣಾಧಿಕಾರಿ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ.

ರಾಷ್ಟ್ರಗೀತೆಗೆ ಅವಮಾನ? — ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಚರ್ಚಾಸ್ಪದ ಹೇಳಿಕೆ.

ಅಕ್ರಮ ಗೋವಾ ಸಾಗಾಟ. ಕಾರವಾರದ ಮೂವರ ಬಂಧನ

ಭಟ್ಕಳಕ್ಕೆ ಬಂತು ಹವಾಲ ಹಣ, ಬಂಗಾರ. ಪತ್ತೆ ಮಾಡಿದ ಪೊಲೀಸರು. ಓರ್ವ ಆರೆಸ್ಟ್.

ಹೊನ್ನಾವರ ವಾಣಿಜ್ಯ ಬಂದರು ಯೋಜನೆ. ಸಿಎಂ ಭೇಟಿಯಾದ ಖ್ಯಾತ ಪರಿಸರವಾದಿ ಮೇದಾ ಪಾಟ್ಕರ್.