ಶಿರಸಿ (SIRSI) : ಶಿರಸಿ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ (Marikamba Highschool) ಉಪ ಪ್ರಾಂಶುಪಾಲರಾಗಿ (Deputy Principal) ಸೇವೆ ಸಲ್ಲಿಸುತ್ತಿದ್ದ ಯಜ್ಷೇಶ್ವರ ಆರ್ ನಾಯ್ಕ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಹ ಸಿದ್ದಾಪುರ (Siddapur) ತಾಲೂಕಿನ ಬೇಡ್ಕಣಿಯವರಾಗಿದ್ದ ಅವರು ಹಾವೇರಿಯಲ್ಲಿ(Haveri) ಮುಖ್ಯೋದ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಮೃತ ದೇಹವನ್ನು ಮಾರಿಕಾಂಬಾ ಶಾಲೆಗೆ ತಂದು ಬಳಿಕ ಅವರ ಹೂಟ್ಟೂರಿಗೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ನೆಚ್ಚಿನ ಉಪ ಪ್ರಾಂಶುಪಾಲರಿಗೆ ಕಣ್ಣೀರಿನಲ್ಲಿ ಅಂತಿಮ ದರ್ಶನ ಪಡೆದರು.

ಮೃತರು ಪತ್ನಿ ಈರ್ವರು ಪುತ್ರಿಯರು ಮತ್ತು ತಮ್ಮನ್ನು ಪ್ರೀತಿಸುತ್ತಿದ್ದ ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕವೃಂದದವರನ್ನು ಬಂದು ಬಳಗದವರನ್ನು ಬಿಟ್ಟು ಅಗಲಿದ್ದಾರೆ.

ಯಜ್ಷೇಶ್ವರ ನಾಯ್ಕ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಭೀಮಣ್ಣ ನಾಯ್ಕರು ಟಿ ಎಸ್ ಎಸ್ ಆಸ್ಪತ್ರೆಗೆ (TSS Hospital) ತೆರಳಿ ಅಂತಿಮ ದರ್ಶನ ಪಡೆದು  ಮಾರಿಕಾಂಬಾ ಶಾಲೆಗೆ (Marikamba School)) ಸಲ್ಲಿಸಿದ ಅವರ ಸೇವೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ಜಗದೀಶ ಗೌಡ್ರು ಹಾಜರಿದ್ದರು.

ಮಾರಿಕಾಂಬಾ ಪ್ರೌಢಶಾಲೆಯಲ್ಲಿ ನಿನ್ನೆಯಷ್ಟೇ ನಡೆದ ಪಾಲಕರ ಸಭೆಯಲ್ಲಿ  ಉಪ ಪ್ರಾಂಶಪಾಲರಾದ ಯಜ್ನೇಶ್ವರ್ ಪಾಲಕರನ್ನುದ್ದೇಶಿಸಿ ಯಾವ ಪಾಲಕರು ಹೆದರುವ ಅವಶ್ಯಕತೆಯಿಲ್ಲ.ಯಾವ ಮಕ್ಳಳೂ ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಎಂದು ಹೇಳಿದ್ದರು.

ಮತ್ತೋರ್ವ ಶಿಕ್ಷಕಿ ಸಾವು : ಶಿರಸಿಯ (Sirsi) ಪ್ರತಿಷ್ಠಿತ ಚಂದನ ಶಾಲೆಯ (Chandan School) ಶಿಕ್ಷಕಿಯಾಗಿದ್ದ ಮಾದೇವಿ ಕಿರಣ ನಾಯ್ಕ ಇಂದು ನಿಧನರಾಗಿದ್ದಾರೆ

ಮೂಲತಹ ಕುಮಟ (Kumta) ನಿವಾಸಿಯಾಗಿ ಶಿರಸಿ ಚಿಪಗಿ ನಾರಾಯಣಗುರು (Chipagi Marayanguru) ನಗರದಲ್ಲಿ ನೆಲೆಸಿದ್ದ ಮಾದೇವಿ ಇವರು ಚಂದನ ಶಾಲೆಯಲ್ಲಿ ಆರಂಭದಿಂದಲೂ ಕನ್ನಡ ಶಿಕ್ಷಕಿಯಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸಗಾಗಿ ಮಂಗಳೂರಿಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತರು ಪತಿ ಈರ್ವರು ಪುತ್ರಿಯರು ಹಾಗು ತಾವು ಅಪಾರವಾಗಿ ಪ್ರೀತಿಸುತ್ತಿದ್ದ ವಿದ್ಯಾರ್ಥಿ ಹಾಗು ಶಿಕ್ಷಕ ವೃಂದವನ್ನು ಅಗಲಿದ್ದಾರೆ. ಶಿಕ್ಷಕಿ ಮಾದೇವಿ ನಿಧನಕ್ಕೆ ಮಲೆನಾಡು ಚಂದನ ಶಾಲೆಯ ಕಾರ್ಯದರ್ಶಿ  ಎಲ್ ಎಮ್ ಹೆಗಡೆ ತೀವೃ ಸಂತಾಪ ವ್ಯಕ್ತಪಡಿಸಿ ಅವರು ಶಾಲೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.