ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಸುರಕ್ಷಿತ ಚಾಲನೆಗೆ  ಮಾದರಿಯಾಗಿರುವ ಭಟ್ಕಳದ ಚಾಲಕರೊಬ್ಬರು  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂ)(NWKSRTC) ವತಿಯಿಂದ 2022–23ನೇ ಸಾಲಿನ “ಸುರಕ್ಷಾ ಚಾಲಕ” ಬೆಳ್ಳಿ ಪದಕ(Silver Medal) ಗೌರವಕ್ಕೆ ಆಯ್ಕೆ ಆಗಿದ್ದಾರೆ.

ಭಟ್ಕಳದ ರಾಮಚಂದ್ರ ಎಲ್. ನಾಯ್ಕ ಅವರಿಗೆ ಗೌರವ ಪ್ರಾಪ್ತವಾಗಿದೆ. ಶಿರಸಿ ಘಟಕದ(Sirsi Division) ಭಟ್ಕಳ ಡಿಪೋಗೆ(Bhatkal Depot) ಸೇರಿದ ರಾಮಚಂದ್ರ ನಾಯ್ಕ ಅವರು ಭಟ್ಕಳ ತಾಲ್ಲೂಕಿನ  ತಲಾನ ಕಸಲಗದ್ದೆ ಗ್ರಾಮದವರು. ಕಳೆದ ಐದು ವರ್ಷಗಳಿಂದ ಯಾವುದೇ ಅಪಘಾತವಿಲ್ಲದೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಮಳೆಗಾಲದ ರಾತ್ರಿ, ಕಷ್ಟದ ಹಾದಿ, ದಟ್ಟ ಸಂಚಾರ — ಯಾವ ಸವಾಲಿನಲ್ಲೂ ಕರ್ತವ್ಯದಿಂದ ಹಿಂದೆ ಸರಿಯದೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ‌ ಸ್ಥಾನಕ್ಕೆ ತಲುಪಿಸುತ್ತಿರುವುದಕ್ಕಾಗಿ ಸಂಸ್ಥೆಯು ಈ ಗೌರವಕ್ಕೆ ರಾಮಚಂದ್ರ ಅವರನ್ನ ಆಯ್ಕೆ ಮಾಡಿದೆ.

ಶುಕ್ರವಾರ ಹುಬ್ಬಳ್ಳಿ–ಧಾರವಾಡದ(Hubli-Dharwad) ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮದ ವೇಳೆ  ಪದಕ ಪ್ರದಾನ ನಡೆಯಲಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು. ರಾಮಚಂದ್ರ ನಾಯ್ಕರ ಈ ಸಾಧನೆ ಭಟ್ಕಳ ಡಿಪೋಗೆ ಮಾತ್ರವಲ್ಲ, ಇಡೀ ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ಸಿಬ್ಬಂದಿಗೆ ಪ್ರೇರಣೆಯಾಗಿದೆ.

ಇದನ್ನು ಓದಿ : ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ. ಸಹೋದರ ಜೈಲಿಗೆ.

ಕಾರವಾರದ ಹುಡುಗಿ ಮಿನಿ ಓಲಂಪಿಕ್ ಗೇಮ್ ನಲ್ಲಿ ಪ್ರಥಮ.

ಪ್ರೇಕ್ಷಕರ ಮನ ಗೆದ್ದ ಖ್ಯಾತ ಕಳ ನಟ ಹರೀಶ ರಾಯ್ ವಿಧಿ ವಶ.

.