ಭಟ್ಕಳ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಳೆಗಾಲದ ಅವ್ಯವಸ್ಥೆಗೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ವರುಣನ ಆರ್ಭಟಕ್ಕೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ರಂಗೀಕಟ್ಟೆ ಪ್ರದೇಶದಲ್ಲಿ ಹೆದ್ದಾರಿ ಈ ಬಾರಿಯೂ ಹೊಳೆಯಾಗಿದೆ. ದಪ್ಪ ಚರ್ಮದ ಅಧಿಕಾರಿಗಳಿಗೆ ಜನರ ಕೂಗು ಕೇಳಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಕೂಡ ಇಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ಜನರಿಗೆ, ವಾಹನ ಸವಾರರಿಗೆ ತೊಂದರೆಯಾದಾಗ ಪ್ರತಿಭಟನೆ ನಡೆಸಲಾಗಿತ್ತು. ಸಚಿವರಾದ ಮಾಂಕಾಳ್ ವೈದ್ಯ ಗುಡುಗಿದ್ದರು. ಆದ್ರೆ ಐಆರ್ಬಿ ಅಧಿಕಾರಿಗಳು ಯಾವ ಕೆಲಸವನ್ನ ಮಾಡದೇ ಇರುವುದರಿಂದ ಮತ್ತೆ ಪರಿಸ್ಥಿತಿ ಪುನರಾವರ್ತನೆಯಾಗಿದೆ. ವಾಹನ ಸವಾರರು ಮತ್ತೆ ಪರದಾಡಬೇಕಾಗಿದೆ
ಚರಂಡಿಯಲ್ಲಿ ಮಣ್ಣು, ಕಲ್ಲನ್ನು ತುಂಬಿರುವುದರಿಂದ ತಾಲೂಕಿನ ಕೋಗ್ತಿ ರೋಡ್, ಡೊಂಗರಫಳ್ಳಿ, ಆಝಾದ್‌ನಗರ, ಕಾರಗದ್ದೆ ರಸ್ತೆಗಳು ಕೊಚ್ಚೆಯಾಗಿದೆ. ಜಾಮೀಯಾಬಾದ್‌ನಲ್ಲಿಯೂ ಮನೆಗೆ ಮಳೆ ನೀರು ನುಗ್ಗಿ ತೊಂದರೆಯಾಗಿದೆ. ಒಟ್ಟಿನಲ್ಲಿ ಮಳೆ ನಾಗರಿಕರು ಪರದಾಡುವಂತೆ ಮಾಡಿದೆ.