ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಭಟ್ಕಳ ಗ್ರಾಮೀಣ ಠಾಣೆಯ(Bhatkal Rural Station) ಪೊಲೀಸರು ತಾಲೂಕಿನ ಶಿರಾಲಿ ಗ್ರಾಮದ(Shirali Village) ತೆಕ್ಕಿನಗದ್ದೆ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಜೂಜಾಟದ ಅಡ್ಡೆ (Raid) ಮೇಲೆ ದಾಳಿ ನಡೆಸಿದ್ದಾರೆ
ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹೊನ್ನಾವರ ಮೂಲದ(Honnavar Native) ಅಕ್ಷಯ ರಮೇಶ್ ಮಡಿವಾಳ, ಸುಬ್ರಾಯ ಕೃಷ್ಣ ಗೌಡ ಹಾಗೂ ಅಜಿತ ಜಟ್ಟಿ ಗೌಡ ಎಂದು ಗುರುತಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಸುಮಾರು 5.05 ಲಕ್ಷ ರೂ. ಮೌಲ್ಯದ ಸ್ವತ್ತುಗಳು ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಇನ್ನೂ ಏಳು ಮಂದಿ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯು ಮುಂದುವರಿಸಿದ್ದಾರೆ.
ಭಟ್ಕಳ ಗ್ರಾಮೀಣ ಠಾಣೆಯ(Bhatkal Rural Station) ಪೊಲೀಸ್ ನಿರೀಕ್ಷಕ ಮಂಜುನಾಥ ಅಂಗಾರೆಡ್ಡಿ ಅವರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.
ಇದನ್ನು ಓದಿ : ಆರ್‌ಟಿಐ ಸೋಗಿನಲ್ಲಿ ಕೋಟಿ ರೂ. ಡಿಮ್ಯಾಂಡ್. ಪೊಲೀಸ್ ಆಯುಕ್ತ ನೇತೃತ್ವದ ತಂಡದಿಂದ ಹಲವರ ಬಂಧನ.
ಅಪಘಾತ ರಹಿತ ಸೇವೆಗೆ ಭಟ್ಕಳದ ರಾಮಚಂದ್ರ ನಾಯ್ಕ ಅವರಿಗೆ ‘ಸುರಕ್ಷಾ ಚಾಲಕ’ ಬೆಳ್ಳಿ ಪದಕ ಗೌರವ ಪ್ರಶಸ್ತಿ
ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ. ಸಹೋದರ ಜೈಲಿಗೆ.

