ಕುಮಟಾ : ಬೈಕ್ ನಲ್ಲಿ ತೆರಳುತ್ತಿದ್ದ ಸವಾರನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಕುಮಟಾ ತಾಲೂಕಿನ ಕೊಪ್ಪಳಕರವಾಡಿ ಬ್ರೌನ್ ವುಡ್ ಶಾಪ್ ಹತ್ತಿರ ಸಂಭವಿಸಿದೆ.

ರಾ ಹೆ 66 ರಲ್ಲಿ ಈ ಘಟನೆ ನಡೆದಿದ್ದು ಸುರಜ್  ಮಂಜುನಾಥ ಮಡಿವಾಳ  (22)  ಮೃತ ದುರ್ದೈವಿ. ಈತ ರೈಲ್ವೇ ಸ್ಟೇಶನ್ ಹತ್ತಿರ ನಿವಾಸಿ ಎಂದು ಗುರುತಿಸಲಾಗಿದೆ.

ಸೂರಜ್ ಕುಮಟದಿಂದ ಹೊನ್ನಾವರ ಕಡೆ ತೆರಳುತ್ತಿದ್ದಾಗ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.  ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.