ಅಂಕೋಲಾ ANKOLA : ಮಳೆಗಾಲದ ತಂಪು ಚಾವಣಿಯ ಅಡಿಯಲ್ಲಿ ಜೂಜಾಟ, ಮಟ್ಕಾದಂಥ ಕಾನೂನು ಬಾಹೀರ ಚಟುವಟಿಕೆ ಜಾಸ್ತಿಯಾಗುತ್ತಿದೆ. ಪೊಲೀಸರು ಕೂಡ ಅಲ್ಲಲ್ಲಿ ದಾಳಿ RIAD ನಡೆಸುತ್ತಲೇ ಇದ್ದಾರೆ.

Ankola ತಾಲೂಕಿನ ಕೇಣಿ ಮೈದಾನದಲ್ಲಿ ಸಮೀಪ ಗಾಬಿತ ಕೇಣಿಗೆ ಹೋಗುವ ಸಾರ್ವಜನಿಕ public ರಸ್ತೆಯ ಬದಿಯಲ್ಲಿ  ಮಟಕಾ ಆಡಿಸುವ ವೇಳೆ  ಪೊಲೀಸರು ದಾಳಿ ನಡೆಸಿದ್ದಾರೆ. ಓಸಿ ಆಡಿಸುತ್ತಿದ್ದ  ಬುಕ್ಕಿಯ ಮೇಲೆ  ಪ್ರಕರಣ ದಾಖಲಿಸಲಾಗಿದೆ.

ಶ್ಯಾಮ ಗೋಪಿನಾಥ ಬಂಟ್  ಎಂಬಾತ  ಸಾರ್ವಜನಿಕ ಸ್ಥಳಗಳಲ್ಲಿ  ಮಟಕಾ ಬರೆಯುತ್ತಿದ್ದಾಗ ಪಿಎಸೈ PSI ಉದ್ದಪ್ಪ ಧರೆಪ್ಪನವರ್‌ ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ  ಒಟ್ಟು 15970 ರೂ ನಗದು ಹಣ ಮತ್ತು ಮಟಕಾ ಆಡಲು ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇಣಿಯ ಶ್ಯಾಮ ಗೋಪಿನಾಥ ಬಂಟ ಎಂಬುವವರ ಮೇಲೆ  ಪ್ರಕರಣ ದಾಖಲಾಗಿದೆ. ಹಾಗೆ ಈತನಿಂದ ಸಂಗ್ರಹವಾದ ಮಟ್ಕಾ ಚೀಟಿ ಹಾಗೂ ಹಣವನ್ನು ತೆಗೆದುಕೊಳ್ಳುತ್ತಿದ್ದ ಆರೋಪದ ಮೇಲೆ ಸಂದೀಪ  ಎನ್ನುವವರ ಮೇಲೆಯೂ ಪೊಲೀಸರು ಎಫ್‌ಐಆ‌ರ್ FIR ದಾಖಲಿಸಿದ್ದಾರೆ.

ಪಿಎಸೈ ಸುನೀಲ ಹುಳ್ಳೋಳ್ಳಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಅಂಕೋಲಾANKOLA AREA ಭಾಗದಲ್ಲಿ ಹೆಚ್ಚಾಗಿ ಕಾನೂನು ಬಾಹೀರ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.