ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) :   ಬಿಸಿಯೂಟ(Midmeals) ತಯಾರಿಸುತ್ತಿದ್ದ ಸಿಬ್ಬಂದಿಯೋರ್ವರು ಕರ್ತವ್ಯದಲ್ಲಿರುವಾಗಲೇ   ಕುಸಿದು ಬಿದ್ದು ಮೃತಪಟ್ಟ  ಘಟನೆ ದಾಂಡೇಲಿಯಲ್ಲಿ(Dandeli) ನಡೆದಿದೆ.

ಮಹಾದೇವಿ ಶಿವಾಜಿ ನೆರವಡೆ (50) ಮೃತ ದುರ್ದೈವಿ. ದಾಂಡೆಲಿಯ ಜನತಾ ವಿದ್ಯಾಲಯ ಪ್ರೌಢಶಾಲೆಯ(Dandeli Janata vidyala highschool) ಬಿಸಿಯೂಟ ತಯಾರಿಸುವ ಕೋಣೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ  ಮಹಾದೇವಿ ಸಡನ್ನಾಗಿ  ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹೋದ್ಯೋಗಿಗಳು ಹಾಗೂ ಶಿಕ್ಷಕರು ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ(Government hospital) ಕರೆದೊಯ್ದರು ಪ್ರಯೋಜನವಾಗಿಲ್ಲ.

ಕಳೆದ ಇಪ್ಪತ್ತಕ್ಕೂ  ಹೆಚ್ಚು ವರ್ಷಗಳಿಂದ ಬಿಸಿಯೂಟ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾದೇವಿ, ಕಳೆದ ಐದು ವರ್ಷಗಳಿಂದ ಜನತಾ ವಿದ್ಯಾಲಯದಲ್ಲಿ ಶ್ರದ್ದೆಯಿಂದ  ಕರ್ತವ್ಯ ನಿರ್ವಹಿಸುತ್ತಿದ್ದರು.  ಕಳೆದ ವರ್ಷ ಅವರು ಪತಿಯನ್ನಕಳೆದುಕೊಂಡ ದುಃಖದಲ್ಲಿದ್ದರು. ಆದಾದ ನಂತರ  ಮಗನೂ ಜೀವ ತ್ಯಜಿಸಿದ್ದ. ಇದೀಗ ಮಹಾದೇವಿ ಅವರ ಅಗಲಿಕೆಯಿಂದ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

ಅವರ ಹಠಾತ್ ನಿಧನಕ್ಕೆ ನಗರದ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.

ಇದನ್ನು ಓದಿ : ದಾರಿ ಸಿಗದೇ ಕಾಡಲ್ಲಿ ನಾಲ್ಕು ದಿನ ಕಳೆದ  ವೃದ್ದ ವೈದ್ಯ.  ಪತ್ತೆ ಹಚ್ಚಿದ ಪೊಲೀಸ್ ‌ಶ್ವಾನ.

ಅಂದರ್ ಬಾಹರ್ ಆಡಲು ಹೋಗಿ ಸಿಕ್ಕಿ ಬಿದ್ದ ಮೂವರು. ಏಳು ಮಂದಿ ಪರಾರಿ

ಆರ್‌ಟಿಐ ಸೋಗಿನಲ್ಲಿ ಕೋಟಿ‌ ರೂ. ಡಿಮ್ಯಾಂಡ್. ಪೊಲೀಸ್ ಆಯುಕ್ತ ನೇತೃತ್ವದ ತಂಡದಿಂದ ಹಲವರ ಬಂಧನ.

ಅಪಘಾತ ರಹಿತ ಸೇವೆಗೆ ಭಟ್ಕಳದ ರಾಮಚಂದ್ರ ನಾಯ್ಕ ಅವರಿಗೆ ‘ಸುರಕ್ಷಾ ಚಾಲಕ’ ಬೆಳ್ಳಿ ಪದಕ ಗೌರವ ಪ್ರಶಸ್ತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ. ಸಹೋದರ ಜೈಲಿಗೆ.

ಕಾರವಾರದ ಹುಡುಗಿ ಮಿನಿ ಓಲಂಪಿಕ್ ಗೇಮ್ ನಲ್ಲಿ ಪ್ರಥಮ.

ಪ್ರೇಕ್ಷಕರ ಮನ ಗೆದ್ದ ಖ್ಯಾತ ಕಳ ನಟ ಹರೀಶ ರಾಯ್ ವಿಧಿ ವಶ.