ಕಾರವಾರ : ಒಬ್ಬ ಪ್ರತಿಭಾನ್ವಿತನ ಬೆನ್ನಿಗೆ ನಿಂತರೆ ಹೇಗೆ ಆತ ಬೆಳೆಯಬಲ್ಲ ಎಂಬುದಕ್ಕೆ ಇವರೇ ಉದಾಹರಣೆ. ಕೆಲ ವರ್ಷಗಳ ಹಿಂದೆ ರಾತ್ರಿ ಬೆಳಗಾಗುವುದರೊಳಗೆ ಪಾಪ್ಯುಲರ್ ಆದ ರಾಣು ಮಂಡಲ್ ಹೆಸರು ಕೇಳಿದ್ದೇವೆ. ಇದೀಗ ನಿಮ್ಮ ಸುತ್ತಲೇ ಇರುವ ಬಡ ಹುಡುಗನೊಬ್ಬ ಈಗ ನಿದ್ದೆಗೆಡಿಸಿದವರ ನಿದ್ದೆ ಗೇಡಿಸಿದ್ದಾನೆ. ಅವ್ರೆ ‘ರವಿ ಸಿಂಗರ್ ಕುಮಟಾ’.
ಹಿಂದೆಲ್ಲ ಈತನ ಹಾಡಿಗೆ ಸಾಕಷ್ಟು ಜನರು ಗೇಲಿ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಅಪಹಾಸ್ಯಕ್ಕೊಳಗಾದವ ಈತನೆ ಇರಬೇಕೆನ್ನಿಸುತ್ತೆ. ಈತ ಕಣ್ಣೇರು ಹಾಕಿದಲ್ಲದೆ ತನ್ನ ಮಗನ ಬಗ್ಗೆ ತಾಯಿ ಕೂಡ ನೆಟ್ಟಿಗರಲ್ಲಿ ಪ್ರಾರ್ಥಿಸಿಕೊಂಡು ತನ್ನ ಮಗನಿಗೆ ಗೇಲಿ ಮಾಡ್ಬೇಡಿ ಎಂದಿದ್ದಳು.
ಹೌದು. ಇದೀಗ ರವಿ ಕುಮಟಾ ಫೇಮಸ್ ಗಾಯಕರ ಸಾಲಿಗೆ ನಿಲ್ಲುವ ಲಕ್ಷಣ ಕಾಣುತ್ತಿದೆ. ಮಂಗಳೂರಿನ ಅನೀಶ್ ಕಿನ್ನಿಗೋಳಿ ಅವರ ನೆರವು ಮತ್ತು ಪ್ರೋತ್ಸಾಹದಿಂದ ಅವರ ಸ್ಟುಡಿಯೋದಲ್ಲಿ ರವಿಗೆ ಹಾಡುವ ಅವಕಾಶ ದೊರೆತಿದೆ. ಮೊದಲ ಬಾರಿಗೆ ದುನಿಯಾ ವಿಜಯ್ ಅಭಿನಯದ ಜಂಗ್ಲಿ ಚಿತ್ರದ ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.. ಹಾಡನ್ನ ತುಂಬಾ ಮಧುರವಾಗಿ ಹಾಡಿದ್ದಾನೆ. ಹಾಡಿನ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ. ರವಿಯ ಈ ಹಾಡನ್ನ ಕೇಳಿದವರು ರವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಅವಕಾಶಕ್ಕಾಗಿ ಕಾದು ಕುಳಿತಿದ್ದ ರವಿಗೆ ಸ್ಟಾರ್ ಆಗಿ ಮಿಂಚಲು ಅನೀಶ್ ಕಿನ್ನಿಗೋಳಿ ಕಾರಣರಾಗಿದ್ದಾರೆ. ಎಲೆ ಮರೆಯ ಕಾಯಿಯಂತಿರುವ ರವಿ ಈಗ ಅನಿಶ್ ಅವರ ಗರಡಿಯಲ್ಲಿ ಪಳಗುತ್ತಿದ್ದಾರೆ. ಪಾಪ. ಅಷ್ಟೇನೂ ಶಿಕ್ಷಣ ಪಡೆಯದ ರವಿಯಲ್ಲಿ ಅದ್ಬುತ ಕಂಠವಿದೆ. ಸಂಗೀತದ ಬಗ್ಗೆ ಏನು ಗೊತ್ತಿಲ್ಲದ ಕಾರಣಕ್ಕೆ ಟೀಕೆಗೊಳಗಾಗುತ್ತಿದ್ದ. ತರಬೇತಿ ನೀಡಿದ್ರೆ ಒಳ್ಳೆಯ ಹಾಡುಗಾರ ಆಗಬಲ್ಲ ಎಂಬುದಕ್ಕೆ ರವಿಯ ನೀನೆಂದರೆನನ್ನೊಳಗೆಏನೋಒಂದುಸಂಚಲನ.. ಕಾರಣ. ರವಿ ಕುಮಟಾ ಅವರ ಬದಲಾವಣೆಗೆ ಕಾರಣರಾದ ಹಗಲಿರುಳು ಕಷ್ಟಪಡುತ್ತಿರುವ ಅನೀಶ್ ಕಿನ್ನಿಗೋಳಿ ಚಾನೆಲ್ ನ ಎಲ್ಲರಿಗೂ ರವಿ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಉತ್ತರಕನ್ನಡ ಮೂಲದ ರವಿಸಿಂಗರ್ ಕುಮಟಾ ಮುಂದೆ ಇನ್ನಷ್ಟು ಬೆಳೆಯಲಿ. ಗಾಯನ ಲೋಕದಲ್ಲಿ ಇನ್ನೂ ರವಿ ಶಕೆ ಆರಂಭ. ಟ್ರೋಲಿಗರು ಲೈಕ್ ಮಾಡುವ ಸಂದರ್ಭ. ಈ ಸಮಾಚಾರ ವತಿಯಿಂದ ಆಲ್ ದಿ ಬೆಸ್ಟ್ ರವಿ..