ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ/ಮುರ್ಡೇಶ್ವರ (Bhatkal/Murdeshwar) : ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ(Matka joojata) ನಡೆಸುತ್ತಿದ್ದ ವ್ಯಕ್ತಿಗಳನ್ನ ಪ್ರತ್ಯೇಕ ಪ್ರಕರಣದಲ್ಲಿ     ಮುರ್ಡೇಶ್ವರ(Murdeshwar) ಹಾಗೂ ಭಟ್ಕಳ ಗ್ರಾಮೀಣ ಪೊಲೀಸರು(Bhatkal Rural Police) ಬಂಧಿಸಿದ್ದಾರೆ.

ಮಾವಿನಕಟ್ಟೆಯ ಮಂಜುನಾಥ ಡಿಲಕ್ಸ್ ಹೋಟೆಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಮುರ್ಡೇಶ್ವರ ನ್ಯಾಶನಲ್ ಕಾಲೋನಿ(National Colony) ನಿವಾಸಿ  ಗಿರೀಶ  ಮಂಜುನಾಥ ಬಾಕಡ ಎಂಬಾತ  ಮಟ್ಕಾ, ಓಸಿ ಜೂಜಾಟ ನಡೆಸುತ್ತಿದ್ದಾನೆಂಬ ನಿಖರ ಮಾಹಿತಿಯ ಮೇರೆಗೆ ಮುರ್ಡೇಶ್ವರ ಠಾಣೆ ಪಿಎಸೈ ಲೋಕನಾಥ ರಾಠೋಡ ದಾಳಿ ನಡೆಸಿ ನಗದು ಹಾಗೂ ಇತರೆ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ  ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ(Murdeshwar Police Station)  ಪ್ರಕರಣ ದಾಖಲಾಗಿದೆ.

ಭಟ್ಕಳ‌ ತಾಲೂಕಿನ(Bhatkal Taluku)  ಹನೀಪಾಬಾದ್(Haneefabad) ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓಸಿ  ಮಟಕಾ ಜೂಗಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್‌(Bhatkal Rural Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಿರಾಲಿ ಕೋಟೆಬಾಗಿಲು(Shirali Kotebagilu) ನಿವಾಸಿ  ಮಂಜುನಾಥ ತಂದೆ ನಾರಾಯಣ ನಾಯ್ಕ  ಹಾಗೂ ಚಿತ್ರಾಪುರದ ರೋಹಿದಾಸ ತಂದೆ ಭೈರಪ್ಪ ನಾಯ್ಕ ಎಂಬುವವರು ಓಸಿ ಮಟ್ಕಾದಿಂದ   ಸಂಗ್ರಹಿಸಿದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರೆಂಬ  ಗುಪ್ತ ಮಾಹಿತಿ ಪಡೆದ  ಗ್ರಾಮೀಣ ಠಾಣೆ ಸಿಪಿಐ(Rural Station Cpi) ಮಂಜುನಾಥ ಲಿಂಗಾರೆಡ್ಡಿ ದಾಳಿ ನಡೆಸಿದ್ದಾರೆ. ನಗದು ಹಾಗೂ ಇತರೆ ವಸ್ತುಗಳು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಕರ್ತವ್ಯದಲ್ಲಿರುವಾಗ ಬಿಸಿಯೂಟದ ಕೋಣೆಯಲ್ಲಿ ಕುಸಿದು ಬಿದ್ದ ಮಹಿಳೆ ಸಾವು

ದಾರಿ ಸಿಗದೇ ಕಾಡಲ್ಲಿ ನಾಲ್ಕು ದಿನ ಕಳೆದ  ವೃದ್ದ ವೈದ್ಯ.  ಪತ್ತೆ ಹಚ್ಚಿದ ಪೊಲೀಸ್ ‌ಶ್ವಾನ.

ಅಂದರ್ ಬಾಹರ್ ಆಡಲು ಹೋಗಿ ಸಿಕ್ಕಿ ಬಿದ್ದ ಮೂವರು. ಏಳು ಮಂದಿ ಪರಾರಿ.

ಆರ್‌ಟಿಐ ಸೋಗಿನಲ್ಲಿ ಕೋಟಿ‌ ರೂ. ಡಿಮ್ಯಾಂಡ್. ಪೊಲೀಸ್ ಆಯುಕ್ತ ನೇತೃತ್ವದ ತಂಡದಿಂದ ಹಲವರ ಬಂಧನ.

ಅಪಘಾತ ರಹಿತ ಸೇವೆಗೆ ಭಟ್ಕಳದ ರಾಮಚಂದ್ರ ನಾಯ್ಕ ಅವರಿಗೆ ‘ಸುರಕ್ಷಾ ಚಾಲಕ’ ಬೆಳ್ಳಿ ಪದಕ ಗೌರವ ಪ್ರಶಸ್ತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ. ಸಹೋದರ ಜೈಲಿಗೆ.

ಕಾರವಾರದ ಹುಡುಗಿ ಮಿನಿ ಓಲಂಪಿಕ್ ಗೇಮ್ ನಲ್ಲಿ ಪ್ರಥಮ.