ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬೆಂಗಳೂರು :  ಯೋಗ ಶಿಕ್ಷಕಿಯೊಬ್ಬರನ್ನ  (Yoga teacher) ಅಪಹರಿಸಿ ದುಷ್ಕರ್ಮಿಗಳು ಸಮಾಧಿ ಮಾಡಿದ ಘಟನೆ ನಡೆದಿದೆ. ಅದೃಷ್ಟವಶಾತ್ ಶಿಕ್ಷಕಿ ಸಮಾಧಿಯಿಂದ ಎದ್ದು ಬಂದು ದೂರು ದಾಖಲಿಸಿದ್ದಾಳೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಡಿಟೆಕ್ಟಿವ್ ಏಜೆನ್ಸಿ(Detective Agency) ಮಾಲೀಕ ಸತೀಶ್‌ರೆಡ್ಡಿ, ರಮಣ, ಸಲ್ಮಾನ್, ರವಿ ಎಂಬುವವರನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ(Shidlaghatta ತಾಲೂಕು ) ದಿಬ್ಬೂರಹಳ್ಳಿ ಠಾಣಾ (Dibburuhalli Station) ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಅಪಹರಣಕ್ಕೊಳಗಾಗಿದ್ದ ಯೋಗ ಶಿಕ್ಷಕಿ ಮೂಲತಃ ದೇವನಹಳ್ಳಿ (Devanahalli) ತಾಲೂಕಿನವರು. ಬೆಂಗಳೂರಿನ ಕೆ ಆರ್ ಪುರಂನಲ್ಲಿ (K R Puram) ವಾಸವಾಗಿದ್ದರು. ಯೋಗ ಶಿಕ್ಷಕಿ ಬಳಿ ಸತೀಶ್‌ರೆಡ್ಡಿ​ ಯೋಗ ಕಲಿಯುವುದಕ್ಕೆ ಹೋಗುತ್ತಿದ್ದ. ನಂತರ ಗನ್ ತರಬೇತಿ ನೀಡುವುದಾಗಿ ಮನೆಗೆ ಬಂದಿದ್ದ.

ಸುಪಾರಿ ಪಡೆದಿದ್ದ ಸತೀಶ್​ ರೆಡ್ಡಿ ಮತ್ತು ಗ್ಯಾಂಗ್​ನಿಂದ ಅಕ್ಟೋಬರ್ 23ರಂದು ಡಿಎಸ್​​ ಮ್ಯಾಕ್ಸ್ ಸನ್ವರ್ತ್​ ಅಪಾರ್ಟ್​ಮೆಂಟ್​ನಿಂದ ಯೋಗ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಆದರೆ ಶಿಕ್ಷಕಿ ಒಪ್ಪದಿದ್ದಾಗ ಸ್ನೇಹಿತರನ್ನ ಕರೆಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಶಿಕ್ಷಕಿ ಸತ್ತು ಹೋಗಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಆಕೆಯ ಮೇಲೆ ಮರದ ಕೊಂಬೆಗಳನ್ನು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಸುಮಾರು ಹೊತ್ತಿನವರೆಗೆ ಸತ್ತಂತೆ ನಟಿಸಿ ಸಮಾಧಿಯಲ್ಲಿದ್ದ ಯೋಗ ಶಿಕ್ಷಕಿ ಗುಂಡಿಯಿಂದ ಎದ್ದು ಹೊರಬಂದಿದ್ದಾರೆ.

ನಂತರ ದಿಬ್ಬೂರಹಳ್ಳಿ ಠಾಣೆಗೆ ಆಗಮಿಸಿ. ಕೊಲೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಪೊಲೀಸರ ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನು ಓದಿ : ಕಾರಿಗೆ ಆಕಸ್ಮಿಕ ಬೆಂಕಿ

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಅನಾರೋಗ್ಯ

ದಾಂಡೇಲಿಯಲ್ಲಿ ಸರಣಿ ಕಳ್ಳತನ

ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ವ್ಯಕ್ತಿ ಬಂಧನ