ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಪ್ರಕರಣವೊಂದರಲ್ಲಿ ಕಾರವಾರ ಶಾಸಕ ಸತೀಶ ಸೈಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ್ದ ಮಧ್ಯಂತರ ಜಾಮೀನು ರದ್ದಾಗಿದ್ದು(Bailed Cancelled), ಮತ್ತೆ ಜೈಲು ಸೇರುವ ಸಾಧ್ಯತೆ ಇದೆ.

ಬೆಲೇಕೇರಿ ಬಂದರಿನಿಂದ(Belekeri Port) ಆಕ್ರಮ ಅದಿರು ಸಾಗಾಟ ಪ್ರಕರಣ‌ದಲ್ಲಿ  ಶಾಸಕ ಸತೀಶ ಸೈಲ್(MLA Satish Sail) ವಿಚಾರಣೆ ಎದುರಿಸುತ್ತಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿದ್ದ ಕಾರವಾರದ ಶಾಸಕ(Karwar MLA) ಸತೀಶ್ ಸೈಲ್‌ಗೆ ನವೆಂಬರ್ 7 ರ ವರೆಗೆ ಜಾಮೀನು ವಿಸ್ತರಣೆ ಮಾಡಿ  ಆದೇಶಿಸಲಾಗಿತ್ತು.  ಇಂದು ಸತೀಶ್ ಸೈಲ್‌ಗೆ ನೀಡಿದ್ದ ಮಧ್ಯಂತರ ಜಾಮೀನು ರದ್ದು ಮಾಡಲಾಗಿದೆ.

ಕಾಂಗ್ರೆಸ್ ಶಾಸಕರಾಗಿ ಸತೀಶ್ ಸೈಲ್ ಅಕ್ರಮ ಅದಿರು(Illegal Ironore) ಸಾಗಾಟ ಪ್ರಕರಣದಲ್ಲಿ ಜೈಲು ಸೇರಿದ್ದರು. ಕೆಲ‌‌ ದಿನಗಳ  ಹಿಂದೆ ಅವರ  ಮನೆಯ ಮೇಲೆ ಇಡಿ ದಾಳಿ(ED Raid) ನಡೆಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿತ್ತು.

ತಮ್ಮ ಆರೋಗ್ಯದ ಸಮಸ್ಯೆಯ ಕಾರಣದಿಂದ  ಚಿಕಿತ್ಸೆ ಪಡೆಯುತ್ತಿದ್ದ ಸತೀಶ್ ಸೈಲ್ ಇ.ಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು.  ಹೈಕೋರ್ಟ್(Highcourt) ಅಕ್ಟೋಬರ್ 25 ರವರೆಗೆ ಜಾಮೀನು ಮಂಜೂರು ಮಾಡಿತ್ತು. ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಕಾರಣದಿಂದ ಜಾಮೀನು ವಿಸ್ತರಿಸುವಂತೆ ಸೈಲ್ ಕೋರಿದ್ದ ಅರ್ಜಿಯನ್ನ ಪರಿಗಣಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ನವೆಂಬರ್ ಏಳರವರೆಗೆ ಜಾಮೀನು ವಿಸ್ತರಿಸಿತ್ತು. ಹೀಗಾಗಿ ಸತೀಶ ಸೈಲ್ ಜಾಮೀನಿನ ಮೇಲಿದ್ದರು ಇದೀಗ ಮತ್ತೆ ಸೈಲ್ ಅವರಿಗೆ ಕಂಠಕ ಎದುರಾಗಿದೆ.

ಇದನ್ನು ಓದಿ : ಲಿಪ್ಟ್ ಕೆಳಕ್ಕೆ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು. ಮುರ್ಡೇಶ್ವರದ ಕಾಮತ್ ಯಾತ್ರಿ ನಿವಾಸದಲ್ಲಿ ಘಟನೆ.

ಮುರ್ಡೇಶ್ವರ ಮತ್ತು ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಮೂವರ ಮೇಲೆ ಪ್ರಕರಣ.

ಕರ್ತವ್ಯದಲ್ಲಿರುವಾಗ ಬಿಸಿಯೂಟದ ಕೋಣೆಯಲ್ಲಿ ಕುಸಿದು ಬಿದ್ದ ಮಹಿಳೆ ಸಾವು

ದಾರಿ ಸಿಗದೇ ಕಾಡಲ್ಲಿ ನಾಲ್ಕು ದಿನ ಕಳೆದ  ವೃದ್ದ ವೈದ್ಯ.  ಪತ್ತೆ ಹಚ್ಚಿದ ಪೊಲೀಸ್ ‌ಶ್ವಾನ.

ಅಂದರ್ ಬಾಹರ್ ಆಡಲು ಹೋಗಿ ಸಿಕ್ಕಿ ಬಿದ್ದ ಮೂವರು. ಏಳು ಮಂದಿ ಪರಾರಿ

ಆರ್‌ಟಿಐ ಸೋಗಿನಲ್ಲಿ ಕೋಟಿ‌ ರೂ. ಡಿಮ್ಯಾಂಡ್. ಪೊಲೀಸ್ ಆಯುಕ್ತ ನೇತೃತ್ವದ ತಂಡದಿಂದ ಹಲವರ ಬಂಧನ.