ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಉತ್ತರಪ್ರದೇಶ(Uttarpradesh): ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಭಿಕ್ಷುಕನ ಜೊತೆ ಓಡಿಹೋದ ಪ್ರಕರಣ ತಿರುವು ಪಡೆದುಕೊಂಡಿದೆ.

ನಾಪತ್ತೆಯಾದ ಮಹಿಳೆ ಪೊಲೀಸ್ ಠಾಣೆಯಲ್ಲಿ (police station) ಪ್ರತ್ಯಕ್ಷವಾಗಿದ್ದಾಳೆ. ತನ್ನ ಪತಿ ಆರೋಪಿಸಿರುವುದು ಸುಳ್ಳು. ತನ್ನ ಪತಿ ಪದೇ ಪದೇ ನಿಂದನೆ ಮತ್ತು ಥಳಿಸಿದ್ದರಿಂದ ಸಂಬಂಧಿಕರ ಮನೆಗೆ ತೆರಳಿದ್ದೆ ಎಂದು ಮಹಿಳೆಯು ಪೊಲೀಸರಿಗೆ ಹೇಳಿದ್ದಾಳೆ.

ಆಕೆ ಯಾರೊಂದಿಗಾದರೂ ಓಡಿಹೋಗಿದ್ದಾಳೆ ಎಂಬ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ದಾಖಲಾದ ನಂತರ ಮಹಿಳೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು ಎಂದು ಹರ್ದೋಯ್ ಪೊಲೀಸರು ತಿಳಿಸಿದ್ದಾರೆ. ಪತಿ ರಾಜು ತನ್ನನ್ನು ನಿಂದಿಸಿ ಥಳಿಸುತ್ತಾನೆ ಎಂದು ರಾಜೇಶ್ವರಿ ಹೇಳಿದ್ದಾಳೆ. ಇದರಿಂದ ಮನನೊಂದ ಆಕೆ ಫರೂಕಾಬಾದ್‌ನಲ್ಲಿರುವ (Farokabad) ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಮಹಿಳೆ ಯಾರೊಂದಿಗಾದರೂ ಹೋಗಿದ್ದಾಳೆ ಎಂಬ ಆರೋಪ ಸುಳ್ಳು ಮತ್ತು ನಿರಾಧಾರವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ   ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನು ಓದಿ : ಅಕ್ರಮವಾಗಿ ಜಾನುವಾರು ಸಾಗಾಟ. ಪೊಲೀಸರಿಂದ ರಕ್ಷಣೆ

ಮನುಷ್ಯನಷ್ಟು ಎತ್ತರದ ಮೀನು ಹಿಡಿದ ಮೀನುಗಾರ.

ಮನೆಗೆ ಬರುವ ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ.

ಮುಖ್ಯವಾಹಿನಿಗೆ ಬರುವ ಮನಸ್ಸು. ಶರಣಾಗಲು ಬಯಸಿದ ನಕ್ಸಲರು.