ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಮಾಜಾಳಿಯ ಶ್ರೀ ರಾಮನಾಥ ದೇವರ ಜಾತ್ರೆ(Ramanath God Jaatra) ಅದ್ದೂರಿಯಿಂದ ಸಂಪನ್ನಗೊಂಡಿತು.
ಸಂಪ್ರದಾಯದಂತೆ ವಾಂಗಡ ಸಮೀಪ ಭಕ್ತರು ಬಿಸಿ ಗಾಳಿ ತುಂಬಿದ ದೊಡ್ಡದಾದ ಬಲೂನ್ ನ್ನ(Big Baloon) ಆಕಾಶಕ್ಕೆ ಹಾರಿ ಬಿಟ್ಟರು. ಕಾರ್ತಿಕ ಮಾಸದ(Kartik Month) ಹುಣ್ಣಿಮೆಯ ದಿನ ಆರಂಭವಾಗುವ ಶ್ರೀ ರಾಮನಾಥ ದೇವರ(Shri Ramanath Dev) ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತದೆ. ದೇವರು ವನಭೋಜನಕ್ಕೆ ತೆರಳಿ ವಾಪಸ್ ಸಾತೇರಿ ದೇವಿಯ(Sateri Devi) ಜೊತೆಗೂಡಿ ಬರುವ ಸಂದರ್ಭದಲ್ಲಿ ಭಕ್ತರು ಬಾಚುಕಣಸ ಮತ್ತು ಏಳನೀರು ದೇವರಿಗೆ ಸಮರ್ಪಿಸುತ್ತಾರೆ. ಮಾರನೇ ದಿನ ದೇವರನ್ನ ರಥದಲ್ಲಿ ಕೂರಿಸಿ ತರುತ್ತಾರೆ. ಆಗ ತಳಿರು ತೋರಣಗಳಿಂದ ಶೃಂಗಾರವಾಗುತ್ತದೆ. ಭಕ್ತರು ದೇವರಿಗೆ ಹಣ್ಣು ಕಾಯಿ ಅರ್ಪಿಸುತ್ತಾರೆ. ಆರತಿ ಬೆಳಗುತ್ತಾರೆ.
ಇದೇ ವೇಳೆ ಸ್ಥಳೀಯರು ತಯಾರಿಸಿದ ಬೃಹತ್ ಗಾತ್ರದ ವಾಪ್ಹರ್ ಬಲೂನನ್ನ(Vapher Baloon) ಆಕಾಶಕ್ಕೆ ಬಿಟ್ಟರು. ಭಕ್ತರಿಂದ ಹರಹರ ಮಹಾದೇವ(Harahara Mahadev) ಉದ್ಘೋಷ ಮುಗಿಲು ಮುಟ್ಟಿತು. ನೂರಾರು ಜನರು ಈ ದೃಶ್ಯವನ್ನು ಕಣ್ತುಂಬಿಕೊಂಡರು.
ಇದನ್ನು ಓದಿ : ಸೋನಾರಕೇರಿಯ ಕೆರೆಯಲ್ಲಿ ಮೀನು ಹಿಡಿಯಲು ಹೋದ ಬಾಲಕ ದುರ್ಮರಣ.
ಶಾಸಕ ಸತೀಶ ಸೈಲ್ ಗೆ ಮತ್ತೆ ಬೇಲೇಕೇರಿ ಪ್ರಕರಣದ ಉರುಳು. ಬಂಧನ ವಾರಂಟ್.
ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ. ಸ್ಥಳದಲ್ಲಿ ಆತಂಕದ ವಾತಾವರಣ.
ಮಾಜಿ ಐಪಿಎಸ್ ಅಧಿಕಾರಿ ಸಿಡಿದಿದ್ಯಾಕೆ. ಸಿಂಗಂ ಖ್ಯಾತಿಯ ಅಣ್ಣಾ ಮಲೈ ಬಿಜೆಪಿಗೆ ಗುಡ್ ಬೈ?

