ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕರ್ತವ್ಯದಲ್ಲಿದ್ದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್ಎಫ್) ಹೆಡ್ ಕಾನ್ಸ್ಟೆಬಲ್(CISF Head Constable) ಮೈಮೇಲೆ ಗೇಟ್ ಬಿದ್ದು ಸಾವನ್ನಪ್ಪಿದ ಘಟನೆ ಕೈಗಾ ಅಣು ವಿದ್ಯುತ್ ಸ್ಥಾವರದ(NPCIL) ಬಳಿ ಸಂಭವಿಸಿದೆ.
ಮಹಾರಾಷ್ಟ್ರದ ಸತಾರನ(Maharashtra Satara) ಶೇಖರ ಭೀಮರಾವ್ (48) ಮೃತ ದುರ್ದೈವಿ. ಶನಿವಾರ ರಾತ್ರಿ ಕೈಗಾ ಅಣು ವಿದ್ಯುತ್ ಸ್ಥಾವರದ(Kaiga NPCIL) ಆವರಣದೊಳಗೆ ಇರುವ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್(Dumping Yard) ಗೆ ಹಾಕಿದ್ದಾರೆಯೆ ಎನ್ನುವುದರ ಪರಿಶೀಲನೆಗೆ ತೆರಳಿದ್ದ ವೇಳೆ ಗೇಟ್ ಮೈಮೇಲೆ ಬಿದ್ದಿದೆ. ಸಿಬ್ಬಂದಿಗಳು ತಮ್ಮ ಹೆಡ್ ಕಾನಸ್ಟೆಬಲ್ ಇಲ್ಲದಿರುವಾಗ ಹುಡುಕಾಡಿದ್ದಾರೆ. ಬಳಿಕ ವಾಕಿಟಾಕಿ ಮೂಲಕ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ನಂತರ ವಾಕಿಟಾಕಿ ಲೊಕೇಶನ್ ಪತ್ತೆ ಮಾಡಿ ಸ್ಥಳಕ್ಕೆ ಧಾವಿಸಿದ್ದರು ಎನ್ನಲಾಗಿದೆ.
ತೀವೃ ಅಸ್ವಸ್ಥಗೊಂಡ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಲ್ಲಾಪುರದ ಆಸ್ಪತ್ರೆಗೆ(Mallapur Hospital) ಕರೆತರುವಾಗಲೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ(Mallapur Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿ : ಬೇಲೇಕೇರಿ ಕೇಸ್. ಶಾಸಕ ಸತೀಶ್ ಸೈಲ್ ಅವರ 21 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು.
ಮಾಜಾಳಿ ಗಡಿಯಲ್ಲಿ ‘ಹರಹರ ಮಹಾದೇವ’. ಹಾರಿದ ವಾಪ್ಹರ್ ಬಲೂನ್.
ಸೋನಾರಕೇರಿಯ ಕೆರೆಯಲ್ಲಿ ಮೀನು ಹಿಡಿಯಲು ಹೋದ ಬಾಲಕ ದುರ್ಮರಣ.
ಶಾಸಕ ಸತೀಶ ಸೈಲ್ ಗೆ ಮತ್ತೆ ಬೇಲೇಕೇರಿ ಪ್ರಕರಣದ ಉರುಳು. ಬಂಧನ ವಾರಂಟ್.
ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ. ಸ್ಥಳದಲ್ಲಿ ಆತಂಕದ ವಾತಾವರಣ.
ಮಾಜಿ ಐಪಿಎಸ್ ಅಧಿಕಾರಿ ಸಿಡಿದಿದ್ಯಾಕೆ. ಸಿಂಗಂ ಖ್ಯಾತಿಯ ಅಣ್ಣಾ ಮಲೈ ಬಿಜೆಪಿಗೆ ಗುಡ್ ಬೈ?

