ಶಿರಸಿ : ತಾಲೂಕಿನ ಹುಡೈಲಕೊಪ್ಪ ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ನಡೆದಿದೆ.
ಬೈಕ್ ಮತ್ತು ಟಾಟಾಎಸ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಮುಂಡಗೋಡ ತಾಲೂಕಿನ ಕುಡಂಬಿಯ ಸುನಿಲ್ ನಿಶಾಮಪ್ಪ ಬಜಂತ್ರಿ( ೩೦) ಎಂಬಾತಾನೆ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಸುನೀಲ್ ಶಿರಸಿ ಗಣೇಶ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.