ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ(Panaji) : ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಅವರು ನವೆಂಬರ್ 28ರಂದು ಗೋವಾದ ಕಾಣಕೋಣದಲ್ಲಿರುವ(Goa Kankon) ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ(Gokarn Parthagali Jeevottama Math) ಆಗಮಿಸಲಿದ್ದಾರೆ. ಶ್ರೀಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ(Sri Vidyadeesha teertha Swamiji) ಉಪಸ್ಥಿತಿಯಲ್ಲಿ ಅವರು 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು(Shriram Bronze Statue) ಅನಾವರಣಗೊಳಿಸಲಿದ್ದಾರೆ.
ಬೆಳಿಗ್ಗೆ 11.05ಗಂಟೆಗೆ ಶ್ರೀರಾಮನ ಪ್ರತಿಮೆಯ ಪ್ರಾಣಪ್ರತಿಷ್ಠೆಯನ್ನು ನೆರವೇರಿಸುವ ಪ್ರಧಾನಿ ನರೇಂದ್ರ ಮೋದಿಯವರು(Prime Minister Narendra Modi) 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ನ್ನು ಉದ್ಘಾಟಿಸಲಿದ್ದಾರೆ.
ನವೆಂಬರ್ 28 ರಂದು ಮಧ್ಯಾಹ್ನ 3.45ಗಂಟೆಗೆ ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಸಂಜೆ ಐದು ಗಂಟೆಗೆ ಶ್ರೀಮಠದಲ್ಲಿ ಉಪಸ್ಥಿತರಿದ್ದು ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿಗಳು ಮಾತನಾಡಲಿದ್ದಾರೆ.
ಗೋವಾದ ಕಾಣಕೋಣದಲ್ಲಿರುವ ಪರ್ತಗಾಳಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್(Goa CM Pramod Savant) ಮಠಕ್ಕೆ ಭೇಟಿಕೊಟ್ಟು ಸಿದ್ಧತಾ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ(Karnataka), ಗೋವಾ(Goa), ಮಹಾರಾಷ್ಟ್ರದಿಂದ(Maharashtra) ಅಸಂಖ್ಯ ಭಕ್ತರು ವರ್ಧಂತ್ಯುತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿಗಳು ಮಠಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.
ಇದನ್ನು ಓದಿ : ರಾತ್ರಿ ರಸ್ತೆಯಲ್ಲಿ ಬೃಹತ್ ಕಾಡಾನೆ ಪ್ರತ್ಯಕ್ಷ. ವಾಹನ ಸವಾರರ ಎದೆಯಲ್ಲಿ ನಡುಕ.
ಆಸ್ತಿ ವಿಚಾರದಲ್ಲಿ ಕಲಹ. ತಂದೆಯನ್ನ ಕೊಗೈದ ಪುತ್ರ.*
ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ಕಾಣೆ. ಪತ್ತೆ ಮಾಡಿ ಕರೆ ತಂದ ಪೊಲೀಸರು.

