ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ನವದೆಹಲಿ (Newdelhi): ಓಯೋ (OYO) ಇತ್ತೀಚೆಗೆ ತನ್ನ ಪಾಲುದಾರ ಹೋಟೆಲ್‌ ಗಳಿಗೆ ಪ್ರಯಾಣ(Tour) ಮತ್ತು ಹೋಟೆಲ್ ಬುಕಿಂಗ್ ಪ್ಲಾಟ್ ಫಾರ್ಮ್(Hotel Booking Flatform)  ಪರಿಷ್ಕೃತ ಹೊಸ ಚೆಕ್-ಇನ್ ನಿಯಮವನ್ನು ಪರಿಚಯಿಸಿದೆ. ಈ ನಿಯಮ ಉತ್ತರ ಪ್ರದೇಶದ (Uttarapradesh) ಮೀರತ್ ನಲ್ಲಿ (Mirat) ಮೊದಲು ಜಾರಿಗೆ ಬರಲಿದೆ.

ನವೀಕರಿಸಿದ ಮಾರ್ಗಸೂಚಿಗಳ ಪ್ರಕಾರ, ಅವಿವಾಹಿತ(Unmarried) ಜೋಡಿಗಳಿಗೆ ಹೋಟೆಲ್ ಕೊಠಡಿಯನ್ನು ನೀಡುವುದಿಲ್ಲ ಎಂದು ಓಯೋ (OYO) ಸಂಸ್ಥೆ ತಿಳಿಸಿದೆ. ಆನ್ ಲೈನ್ ಮೂಲಕ ಕೊಠಡಿಯನ್ನು ಕಾಯ್ದಿರಿಸುವವರು ವಿವಾಹದ ಕುರಿತು ಪುರಾವೆಗಳನ್ನು ನೀಡಬೇಕಾಗಿದೆ
.
ಹೊಸಓಯೋ (OYO) ನೀತಿಯನ್ನು (Policy) ಮೊದಲು ಉತ್ತರಪ್ರದೇಶದ ಮೀರತ್ ನಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಹೊಸ ನೀತಿಯನ್ನು ತಕ್ಷಣವೇ ಜಾರಿಗೆ ತರುವಂತೆ ಈಗಾಗಲೇ ನಗರದ ಪಾಲುದಾರ ಹೋಟೆಲ್ ಗಳಿಗೆ ಸೂಚಿಸಿದೆ.

ಈ ಹಿಂದೆ ‘OYO’ಗೆ ಹೊಟೇಲ್ ರೂಮ್ ಗಳಲ್ಲಿ ಮದುವೆಯಾಗದ ಜೋಡಿಗಳನ್ನು ಚೆಕ್ ಇನ್(Check in) ಮಾಡಲು ಅವಕಾಶ ನೀಡಬಾರದೆನ್ನುವ ಅರ್ಜಿಗಳು ಬಂದಿದ್ದವು. ಮೀರತ್ ನಲ್ಲಿ ಮದುವೆಯಾಗದ ಕೆಲ ಜೋಡಿಗಳು ಹೊಟೇಲ್ ರೂಮ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಓಯೋ (‘OYO’) ಚೆಕ್ ಇನ್ ಮಾಡಲು ಹೊಟೇಲ್ ನಲ್ಲಿ ಅವಕಾಶ ನೀಡಬಾರದೆಂದು ಕೆಲ ನಾಗರಿಕ ಸಮಾಜದ ಗುಂಪುಗಳು ಕಂಪೆನಿಗೆ ಮನವಿ ಮಾಡಿಕೊಂಡಿದ್ದವು. ಹೀಗಾಗಿ ಅರ್ಜಿ ಬಂದ ಬಳಿಕ ಎಚ್ಚೆತ್ತುಕೊಂಡ ‘OYO’ ತನ್ನ ನೀತಿಯಲ್ಲಿ ಪರಿಷ್ಕರಣೆ ಮಾಡಲು ಯೋಜಿಸಿದೆ.

ಓಯೋದ (OYO) ಉತ್ತರ ಭಾರತದ ರಿಜಿನಲ್ ಹೆಡ್ ಪವಾಸ್ ಶರ್ಮಾ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಓಯೋ (OYO) ಹಳೆಯ ನಿಯಮಗಳನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ನಾಗರಿಕ ಸಮಾಜದ ಅಭಿಪ್ರಾಯವನ್ನು ಕೂಡ ಆಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಈ ನೀತಿ ಮತ್ತು ಅದರ ಪರಿಣಾಮವನ್ನು ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ. ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್ ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು, ಓಯೋ (OYO) ಬ್ರಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್ ಗಳ ‘ ವಿರುದ್ಧ ಕ್ರಮವನ್ನು ಕೂಡ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ : ಹಿರಿಯ ಸಾಹಿತಿ ನಾ ಡಿಸೋಜಾ ನಿಧನ. ಮಂಗಳವಾರ ಅಂತ್ಯಕ್ರಿಯೆ.

ನವಜಾತ ಮಕ್ಕಳು, ತಾಯಿ ಹತ್ಯೆಗೈದ ಮಾಜಿ ಸೈನಿಕರ ಬಂಧನ.

ಕಾರವಾರದಲ್ಲಿ ಕುದಿಯುವ ಎಣ್ಣೆಯಿಂದ ಬಿಸಿಬಿಸಿ ವಡೆ ತೆಗೆದು ಭಕ್ತಿಯ ಪರಾಕಾಷ್ಠೆ

ಮಂಗಳೂರಿನಲ್ಲಿ ಎನ್ಎಐ ಘಟಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅಮಿತ್ ಶಾ ಭೇಟಿ.