ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಜೋಯಿಡಾ(Joida) : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಸ್ಕಾಂ ಅಧಿಕಾರಿ(Hescom Officer) ಭುಜಂಗ ಗುಂಜೇಕರ್ ಅವರು ಆತ್ಮಹತ್ಯೆ ಶರಣಾದ ಘಟನೆ ನಡೆದಿದೆ.
ಭುಜಂಗ ಅವರು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದರು. ಕಾಳಿ ಹುಲಿ ಸಂರಕ್ಷಿತ ಅರಣ್ಯ(Kali Tiger Reserve Forest) ವ್ಯಾಪ್ತಿಯ ಕ್ಯಾಸಲರಾಕ್(Castle Rock) ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಮಧ್ಯಾಹ್ನ ಅಧಿಕಾರಿಯ ಮೃತದೇಹ ಪತ್ತೆಯಾಗಿದೆ.
ಕ್ಯಾಸಲರಾಕ್(Castle Rock) ಲಕ್ಷ್ಮಿ ಗಲ್ಲಿಯಲ್ಲಿ ವಾಸವಿರುತ್ತಿದ್ದ ಭುಜಂಗ ಗುಂಜೇಕರ್ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದರು. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ(Ramanagara Police Station) ದೂರು ದಾಖಲಿಸಿದ್ದರು. ಹೀಗಾಗಿ ಶೋಧ ನಡೆಸಲಾಗಿತ್ತು. ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ.
ಇದನ್ನು ಓದಿ : ಗ್ರಾಹಕರಿಗೆ ವಂಚಿಸಿದ ವಂಚಕರು ಪೊಲೀಸರ ಬಲೆಗೆ. ಭಟ್ಕಳದಲ್ಲಿ ಮೂವರಿಗೆ ಡ್ರಿಲ್.
ಬ್ಯಾಂಕ್ ದರೋಡೆಗೆ ಯತ್ನ. ಸೈರನ್ ಕೂಗುತ್ತಿದ್ದಂತೆ ಕಾಲ್ಕಿತ್ತ ದರೋಡೆಕೋರರು

