ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarn) :  ಸಿಲಿಂಡರ್ ಸ್ಪೋಟಗೊಂಡು(Cylinder Blast) ಬೆಂಕಿ ಸಂಭವಿಸಿದ ಪರಿಣಾಮ ಮನೆಯೊಂದು  ಸಂಪೂರ್ಣವಾಗಿ ಧರೆಗುರುಳಿದ  ಘಟನೆ ಗೋಕರ್ಣದ ಬಂಗ್ಲೆಗುಡ್ಡ(Gokarn Banglegudda) ಸಮೀಪ  ಸಂಭವಿಸಿದೆ.

ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಮುರುಳಿಧರ ಕಾಮತ್ ಎಂಬುವವರಿಗೆ ಸೇರಿದ ಮನೆಯಾಗಿದೆ. ಬೆಳಗಿನ ಜಾವ ಮನೆಗೆ ಬೆಂಕಿ ಹೊತ್ತಿಕೊಂಡ ಕೆಲ  ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್  ಸ್ಪೋಟಗೊಂಡು(Gas Cylinder Blast) ಬಾರೀ ಶಬ್ದವಾಗಿದೆ. ಪರಿಣಾಮವಾಗಿ   ಮನೆಯ ಮೇಲ್ಚಾವಣಿ, ಗೋಡೆಗಳು ಸೇರಿದಂತೆ ಆವರಣದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಘಟನೆ ಸಂಭವಿಸುವ  ಸಮಯದಲ್ಲಿ ಮನೆಯಲ್ಲಿ ಯಾರು ಇರಲಿಲ್ಲವಾಗಿದ್ದರಿಂದ  ದೊಡ್ಡ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಘಟನೆ ತಿಳಿಯುತ್ತಿದ್ದಂತೆಯೇ ಕುಮಟಾದಿಂದ ಅಗ್ನಿಶಾಮಕ ದಳದ ವಾಹನ(Fire Brigade Vehicle) ಸ್ಥಳಕ್ಕೆ ಧಾವಿಸಿತು. ಅಗ್ನಿಶಾಮಕ ದಳದ  ಕಾರ್ಯಾಚರಣೆಯ ಬಳಿಕ ಬೆಂಕಿ  ನಿಯಂತ್ರಣಕ್ಕೆ ತರಲಾಗಿದೆ.

ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸ್ ಠಾಣೆಯ(Gokarn Police Station) ಸಿಬ್ಬಂದಿಗಳು‌ ಅಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಗ್ಯಾಸ್ ಲೀಕೆಜ್‌ನಿಂದ(Gas Leakage) ಬೆಂಕಿ ಪ್ರಾರಂಭವಾಗಿ ನಂತರ ಸಿಲಿಂಡರ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ.‌ ಬೆಂಕಿ ಅವಘಡದಿಂದಾಗಿ ಸ್ಥಳೀಯರು  ಬೆಚ್ಚಿಬಿದ್ದಿದ್ದಾರೆ. ಗೋಕರ್ಣ ಪೊಲೀಸರು‌ ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಜಗಲ್‌ಬೆಟ್‌ನಲ್ಲಿ ಮಹಿಳೆಯ ಅಕಾಲಿಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ.

ಗೋವಾ ನೈಟ್ ಕ್ಲಬ್ ದುರಂತ. ಪಾರ್ಟನರ್ ಓರ್ವ ದೆಹಲಿಯಲ್ಲಿ ವಶಕ್ಕೆ.

ಕಾರವಾರ ಜೈಲಿನಲ್ಲಿ ಮತ್ತೆ ಗಲಾಟೆ.‌ ಮಂಗಳೂರು ಮೂಲದ ಆರು ಖೈದಿಗಳಿಂದ ರಂಪಾಟ.