ಕಾರವಾರ(Karwar) : ಅಂಕೋಲಾ(Ankola) ತಾಲೂಕಿನ ಶಿರೂರು(Shiruru) ಕಾರ್ಯಾಚರಣೆಯಲ್ಲಿ ಹೊಂದಾಣಿಕೆಯಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣಾವಾನಂದ ಸ್ವಾಮೀಜಿ(Pranavananda Swamiji) ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಡ್ರೋನ್(Drone) ಕೆಲಸಕ್ಕೆ 2ಲಕ್ಷ 50 ಸಾವಿರ ರೂ. ಹಣ ವ್ಯಯಿಸಲಾಗಿದೆ. ಆರು ದಿನ ಊಟಕ್ಕೆ ಮೂರು ಲಕ್ಷ ಖರ್ಚುಗಿದ್ದು ಹೋಟೆಲ್ ಮಾಲೀಕನಿಗೆ 15 ಲಕ್ಷ ಬಿಲ್ ಕೊಟ್ಟಿದ್ದಾರೆ. ಮಾಹಿತಿ ಹಕ್ಕಿನಡಿ ಮಾಹಿತಿ (RTI) ಪಡೆದಿದ್ದು ಕೇವಲ 15 ದಿನದ ಮಾಹಿತಿ ನೀಡಲಾಗಿದೆ. ಒಟ್ಟು 72 ದಿನದ ಕಾರ್ಯಾಚರಣೆ ನಡೆದಿದೆ ಎಂದರು.
ಕೇರಳದ ಅರ್ಜುನ್ (Keral Arjun) ಮನೆಗೆ ಹೋಗಿ ಶಾಸಕ ಸತೀಶ್ ಸೈಲ್(MLA Satish Sail) ಹಣ ಕೊಟ್ಟು ಬಂದಿದ್ದಾರೆ. ಆದರೆ ಸ್ಥಳೀಯರಾಗಿರುವ ಜಗನ್ನಾಥ್ ಮತ್ತು ಲೋಕೇಶ್ ಮನೆಗೆ ಸೈಲ್ ಇದುವರೆಗೆ ಹೋಗಿಲ್ಲ. ನಾಮಧಾರಿ ಸಮಾಜವನ್ನ(Namadhari Community) ಒಡೆಯುವ ಕೆಲಸವನ್ನು ಸೈಲ್ ಮಾಡಿದ್ದಾರೆಂದು ಆರೋಪಿಸಿದ ಸ್ವಾಮೀಜಿ , ರಾಜ್ಯ ಸರಕಾರದಿಂದ ಪರಿಹಾರ ಕೊಡುತ್ತಿದ್ದಾರೆ. ಲೋಕೇಶ ನಾಯ್ಕ, ಜಗನ್ನಾಥ ನಾಯ್ಕ ಅವರ ಮರಣ ಪ್ರಮಾಣ ಪತ್ರ ಕೊಟ್ಟಿಲ್ಲ. ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕಿರುವ ಅಸ್ತಿ ಯಾರದೆಂಬುದು ಗೊತ್ತಾಗಿಲ್ಲ. ಅಸ್ಥಿ ಗೊತ್ತುಪಡಿಸಲಾಗದಂತೆ ಕೆಮಿಕಲ್ ಜಾಸ್ತಿ ಹಾಕಿದ ಸಿಬ್ಬಂದಿ ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ವಾಮೀಜಿ, ಐಆರ್ಬಿ ಮತ್ತು ಹೆದ್ದಾರಿ ಇಲಾಖೆ ವಿರುದ್ಧ ಕೇಸ್ ಮಾಡಿ ಎಂದು ಕೋರ್ಟ್ ಹೇಳಿದೆ. ಇವತ್ತಿನವರೆಗೆ ಕೇಸ್ ಮಾಡಿಲ್ಲ. ಹೀಗಾಗಿ ಎಸ್ ಪಿ ಅವರ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ತಾವೂ ದಿನಕ್ಕೆ 15 ಬಾರಿ ಫೋನ್ ಮಾಡಿದರು. ಫೋನ್ ಎತ್ತುತ್ತಿಲ್ಲ. ಎಸ್ಪಿ ಅವರು ಐಆರ್ಬಿ ಕಂಪನಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೈಕೋರ್ಟ್(Highcourt) ಮತ್ತು ಲೋಕಾಯುಕ್ತಕ್ಕೆ(Lokayukta) ದೂರು ದಾಖಲಿಸುವುದಾಗಿ ಪ್ರಣಾವಾನಂದ ಸ್ವಾಮೀಜಿ ಹೇಳಿದ್ದಾರೆ. ವಿಷಯಕ್ಕೆ ಸಂಬಂಧಿಸಿ ಡಿಸೆಂಬರ್ 17ರಂದು ಸಮುದಾಯದ ವಿವಿಧ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರನ್ನ ಭೇಟಿ ಮಾಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ನಾಮಧಾರಿ ಈಡಿಗ ಮಂಡಳಿಯ ಜಿಲ್ಲಾ ಅಧ್ಯಕ್ಷ ದೇವರಾಜ ನಾಯ್ಕ, ಶ್ರೀಧರ ನಾಯ್ಕ,ದಾಮೋದರ್ ನಾಯ್ಕ, ಮನಿಷಾ ನಾಯ್ಕ, ವಿನೋದ, ಶ್ರೀನಿವಾಸ ನಾಯ್ಕ ಇದ್ದರು.
ಇದನ್ನು ಓದಿ : ಜೋಕಾಲಿ ಆಡುತ್ತಿದ್ದಾಗ ಹಗ್ಗ ಸುತ್ತಿ ಬಾಲಕಿ ಸಾವು.
ಬಸ್ ಸ್ಟೇರಿಂಗ್ ಗೆ ಚಾಲಕರನ್ನ ಕಟ್ಟಿ ರೈತರ ಆಕ್ರೋಶ
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೆ ವಿರೋಧ.