ಇ ಸಮಾಚಾರ ಡಿಜಿಟಲ್ ನ್ಯೂಸ್ (esamacharadigital news) ಮುರ್ಡೇಶ್ವರ(Murdeshwar) : ಭಟ್ಕಳ ತಾಲೂಕು ಮುರ್ಡೇಶ್ವರ ಪೊಲೀಸ್ ಠಾಣಾ(Murdeshwar Police Station) ವ್ಯಾಪ್ತಿಯ ಮಾವಿನಕಟ್ಟಾ–ಚಿಟ್ಟೆಹಕ್ಲು ಗದ್ದೆಬೈಲ ಪ್ರದೇಶದಲ್ಲಿ ಅಕ್ರಮ ಜುಗಾರಾಟ(Gambling) ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ(Police Raid) ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಆರೋಪಿತರನ್ನು ಬಂಧಿಸಿ ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ 12 ರಂದು ಮುರ್ಡೇಶ್ವರ ಠಾಣಾ ಪಿಎಸ್ಐ ಹಣುಮಂತ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿಗಳು ಈ ದಾಳಿ ನಡೆಸಲಾಗಿತ್ತು. ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ(Public Place) ಜುಗಾರಾಟ ಆಡಿಸುತ್ತಿದ್ದ ವೇಳೆ ದಾಳಿ ನಡೆದಿತ್ತು.
ರವೀಂದ್ರ ಗೋಯ್ದಾ ದೇವಾಡಿಗ(36) ಶಿರಾಲಿ ಹಾಗೂ ಲಕ್ಷ್ಮಣ ಸುಬ್ರಾಯ ದೇವಾಡಿಗ (35) ಮಾವಿನಕಟ್ಟಾ ಇವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಗಣೇಶ ನಾಯ್ಕ, ಸಣ್ಣಬಾವಿ, ಅಳ್ವೇಕೋಡಿ ಎಂಬಾತ ಇತರರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.
ದಾಳಿ ಸಂದರ್ಭದಲ್ಲಿ 1,820 ರೂ. ನಗದು, ಇಸ್ಪೀಟ್ ಎಲೆಗಳು, ಬಟ್ಟೆ, ಮತ್ತು ಮೂರು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸರು(Murdeshwar Police) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನು ಓದಿ : ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಚೈನ್ ಎಗರಿಸಿ ಪರಾರಿ
ನವೋದಯ ಪರೀಕ್ಷೆಯಲ್ಲಿ ಶಿಕ್ಷಕನಿಂದಲೇ ನಕಲು: ಪಾಲಕರ ಆಕ್ರೋಶ, ತೀವ್ರ ಪ್ರತಿಭಟನೆ
