ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ನಗರದ ಹಾಲಮಡ್ಡಿ ಬಳಿ ಪ್ರವಾಸಿಗರ ಹಲ್ಲೆ ಬಳಿಕ ಮೃತರಾಗಿದ್ದ ಸಹಾಯಕ ಸಂರಕ್ಷಣಾಧಿಕಾರಿ  ಮದನ್ ನಾಯಕ(ACF Madam Nayak)  ಕೇಸಿನಲ್ಲಿ ಆರೋಪಿಗಳಿಗೆ  ನ್ಯಾಯಾಲಯ  ಶಿಕ್ಷೆ(Court punishment) ಪ್ರಕಟಿಸಿದೆ.

ಉತ್ತರಕನ್ನಡ(Uttarakannada) ಜಿಲ್ಲೆಯ  ದಾಂಡೇಲಿ ಮೊಸಳೆ ಪಾರ್ಕ್ನಲ್ಲಿ(Dandeli Crocodile Park)   2012  ಮೇ 6 ರಂದು ಎಸಿಎಪ್(ACF) ಅವರನ್ನ ಕೊಲೆ ಮಾಡಲಾಗಿತ್ತು. ಬಾಗಲಕೋಟೆಯಿಂದ(Bagalakote) ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಮೊಸಳೆಗಳಿಗೆ ಮಾಂಸವನ್ನು ಹಾಕುತಿದ್ದ ವೇಳೆ  ಅರಣ್ಯ ಇಲಾಖೆಯ(Forest Department) ಸಹಾಯಕ ಸಂರಕ್ಷಣಾಧಿಕಾರಿಯಾಗಿದ್ದ ಮದನ್ ನಾಯಕ  ಅವರು  ಮೊಸಳೆಗೆ(Crocodile) ಮಾಂಸ ಹಾಕದಂತೆ ತಿಳಿ ಹೇಳಿದ್ದರು. ಆದರೆ ಜಗಳಕ್ಕೆ ಬಂದ ಪ್ರವಾಸಿಗರು‌ ಮದನ ನಾಯಕ ಮೇಲೆ  ಮಾರಣಾಂತಿಕ ಹಲ್ಲೆ ನಡೆಸಿದ್ದರು.

ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ  ಗಂಭೀರ ಗಾಯಗೊಂಡ ಅವರು  ಮೇ 8 ರಂದು ಅಸು ನೀಗಿದ್ದರು. ಈ ಸಂಬಂಧದ   ಅವರ ಪತ್ನಿ ಸುಮತಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳು  ಸರ್ಕಾರಿ ನೌಕರರಾಗಿದ್ದು , ಪೊಲೀಸ್ ತನಿಖೆಯಲ್ಲೂ(Police Investigation) ಪ್ರಭಾವ ಬೀರಿದ್ದರು. ಈ ಹಿನ್ನಲೆಯಲ್ಲಿ ಅಂದಿನ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ(CID)  ವಹಿಸಿತ್ತು.

ತನಿಖೆಯ ವಿಚಾರಣೆ ನಡೆದು  ಈಗ  ಯಲ್ಲಾಪುರ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶರಾದ  ಕಿರಣ್ ಕಿಣಿ ಅವರು ಮೂರನೇ ಆರೋಪಿ ಪ್ರಶಾಂತ್ ರಾಮು ಲಂಬಾಣಿ ಅವರಿಗೆ  10 ವರ್ಷ ಕಾರಾಗೃಹ ವಾಸ,  11 ಸಾವಿರ ದಂಡ  ಜೊತೆಗೆ ಮೃತ ಅಧಿಕಾರಿ ಕುಟುಂಬ ಅವಲಂಭಿತರಾದ ಪತ್ನಿ, ಪುತ್ರ, ಪುತ್ರಿಗೆ ಐವತ್ತು ಸಾವಿರ ಪರಿಹಾರ ನೀಡಲು ಆದೇಶ ಮಾಡಿದೆ.  ಆರೋಪಿತರಾದ ಆನಂದ್ ರೂಪಸಿಂಗ್ ನಾಯ್ಕ, ಸುರೇಶ್ ಶಂಕರಪ್ಪ ನಾಯ್ಕ, ಶೈಲಜಾ , ದಾನಾಬಾಯಿ, ಮಾದುರೀ ರಾಥೋಡ್, ರಾಧಾ ನಾಯ್ಕ ಗೆ ತಲಾ ಒಂದು ಸಾವಿರ ದಂಡ ವಿಧಿಸಿದೆ. ಸರ್ಕಾರದ ಪರ ಶಿರಸಿಯ ರಾಜೇಶ್ ಮಳಗಿಕರ್ ವಾದ ಮಂಡಿಸಿದ್ದರು.
ಇದನ್ನು ಓದಿ : ದಾಂಡೇಲಿಯ ಹಿರಿಯ ವಕೀಲ ಅಜಿತ್ ನಾಯಕ ಹತ್ಯೆ ಕೇಸ್. ನ್ಯಾಯಾಲಯದಿಂದ ತೀರ್ಪು ಪ್ರಕಟ.

ಮಾಜಿ ಸಿಎಂ ಬಂಗಾರಪ್ಪ ಅನುಯಾಯಿ ಭಟ್ಕಳದ ಎಲ್. ಎಸ್. ನಾಯ್ಕ ಅಸ್ತಂಗತ.