ಜೋಯಿಡಾ(JOIDA) : ಪ್ರಯಾಣಿಕನೊರ್ವನ ಮೇಲೆ ಸರ್ಕಾರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ ಘಟನೆ ಜೋಯಿಡಾ ತಾಲೂಕಿನ ರಾಮನಗರ ಬಸ್ ನಿಲ್ದಾಣದಲ್ಲಿ (RAMANAGAR BUS STAND) ನಡೆದಿದೆ.
ಹುಬ್ಬಳ್ಳಿ(HUBBALLI) ಸಾರಿಗೆ ಘಟಕದ ಪಣಜಿಯಿಂದ – ನವಲಗುಂದಕ್ಕೆ (PANAJI to NAVALAGUNDA) ಸಂಚರಿಸುವ ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಈ ಹಲ್ಲೆ ನಡೆಸಿದರೆನ್ನಲಾಗಿದೆ. ರಾಮನಗರ ಬಸ್ ನಿಲ್ದಾಣದ ಕ್ಯಾಂಟೀನ್ ಮುಂಭಾಗದಲ್ಲಿ ಪ್ರಯಾಣಿಕನ ಮೇಲೆ ಕಾಲಿನಿಂದ ತುಳಿದಿದ್ದಾರೆ. ಬಸ್ ಲೇಟಾಗುತ್ತಿದೆ ಎಂದು ಪ್ರಯಾಣಿಕ ಪ್ರಶ್ನಿಸಿದ್ದಕ್ಕಾಗಿ ಹಲ್ಲೆ ನಡೆದಿದೆ.
ಹುಬ್ಬಳ್ಳಿಯ ಮಹಮದ್ ಟಾಕೆವಾಲೇ ಹಲ್ಲೆಗೊಳಗಾದ ಯುವಕನಗಿದ್ದು, ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕನ ಈ ನಡವಳಿಕೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ತವ್ಯದಲ್ಲಿರುವ ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಈ ರೀತಿ ಹಲ್ಲೆ ನಡೆಸಿರುವುದು ಇಲಾಖೆಗೆ ಕೆಟ್ಟ ಹೆಸರು ಬರುವಂತಾಗಿದೆ.
ಇದನ್ನು ಓದಿ : ಸುಳ್ಳು ಸುದ್ದಿ ಹರಡುವವರ ಮೇಲೆ ಕ್ರಮ