ಕಾರವಾರ (KARWAR): ಆನಲೈನ್ ನಲ್ಲಿ ದುಡ್ಡು ಮಾಡುವ ಹುಚ್ಚು ವಿದ್ಯಾವಂತರಲ್ಲಿ ಹೆಚ್ಚಾಗುತ್ತಿದೆ. ಒಂದೇ ಸಮನೇ ಹಣ ಗಳಿಸಲು ಹೋದ ಕಾಲೇಜು ಪ್ರಾಧ್ಯಾಪಕನೋರ್ವ (COLLEGE PROFESSOR) ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.

ಜೊಯಿಡಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ವಾಯೀಜ್ ಎಂಬುವವರೇ  ಹೆಚ್ಚು ಹಣ ಮಾಡುವ ಆಶೆಯಿಂದ ಫೇಸ್‌ಬುಕ್‌ನಲ್ಲಿ ಕಂಡ ಆನಲೈನ್ ಸ್ಪಾಕ್ ಮಾರ್ಕೆಟ್ ಟ್ರೇಡಿಂಗ್ (STOCK  MARKET TRADING) ಜಾಲಕ್ಕೆ ಸಿಲುಕಿ ವಂಚಕರಿಂದ ಬರೋಬ್ಬರಿ 89 ಲಕ್ಷ ರು. ಕಳೆದುಕೊಂಡಿದ್ದಾರೆ.

ಜೊಯಿಡಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮೈಸೂರು ಉದಯಗಿರಿ ಎಸ್.ಬಿ.ಎಮ್ ಕಾಲೋನಿಯ, ಪ್ರಸ್ತುತ ಜೊಯಿಡಾ ಗೌಳಿವಾಡಾದಲ್ಲಿ ವಾಸವಾಗಿದ್ದಾರೆ. ಮಹಮ್ಮದ್ ವಾಯೀಜ್ ತಂದೆ ಮಹಮ್ಮದ್ ಖಲೀಲ್  ಆನಲೈನ್ ವಂಚಕರ ಜಾಲಕ್ಕೆ ಸಿಲುಕಿ  ಒಟ್ಟು 89,44,433 ರೂಪಾಯಿಯನ್ನ ಫೇಸ್‌ಬುಕ್‌ನಲ್ಲಿ ಆನಲೈನ್ ಸ್ಟಾಕ್ ಟ್ರೇಡಿಂಗ್ ಮಾಡುವ ಮೂಲಕ ಅತೀ ಹೆಚ್ಚು ಹಣ  ಗಳಿಸಬಹುದೆಂಬ ಜಾಹೀರಾತನ್ನು  ನೋಡಿದ್ದರು. ಜಾಹೀರಾತಿನ ಕೆಳಗೆ ನಮೂದಿಸಿರುವ ಲಿಂಕ್ ಕ್ಲಿಕ್ (LINK CLICK) ಮಾಡಿದಾಗ ಉಪನ್ಯಾಸಕ ಮಹಮ್ಮದ್ ವಾಟ್ಸಾಪ್ ಗ್ರೂಪ್‌ ಗೆ ಸೇರ್ಪಡೆಯಾಗಿದ್ದರು. ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ತನ್ನ ಮೊಬೈಲ್ ಸಂಖ್ಯೆ 7319318500, 9339534541, 9028137848 ಬಳಸುತ್ತಿದ್ದು, ಟ್ರೇಡಿಂಗ್ ಮಾಹಿತಿ ನೀಡುತ್ತಿದ್ದರು. ತದ ನಂತರ ಫಿರ್ಯಾದುದಾರರಿಗೆ ಟ್ರೇಡಿಂಗ್ ಲಿಂಕ್ ಕಳುಹಿಸಿದ್ದು, ಅದನ್ನು ಓಪನ್ ಮಾಡಿದಾಗ ಆನಂದ ರತಿ ಸೆಕ್ಯೂರಿಟಿ ಎಂಬ ಹೆಸರಿನ ಆ್ಯಪ್ ತೆರೆದುಕೊಂಡಿದೆ. ಹೆಚ್ಚಿನ ಹಣ ಹೂಡಿಕೆ ಮಾಡಲು ಸೂಚಿಸಿ ವಂಚನೆ ನಡೆಸಲಾಗಿದೆ. ಪ್ರಾರಂಭದಲ್ಲಿ 13 ಸಾವಿರ, ನಂತರ 76 ಸಾವಿರ ಹೀಗೆ ಹಂತ ಹಂತವಾಗಿ ಒಟ್ಟೂ 89,44,433 ರೂಪಾಯಿ ಹಣವನ್ನು ಎಗರಿಸಿದ್ದಾರೆ.

ಈ ಬಗ್ಗೆ ಕಾರವಾರದ ಸಿಇಎನ್ ಅಪರಾಧ ಪೊಲೀಸ್(CEN CRIME STATION) ಠಾಣೆಯಲ್ಲಿ ದೂರು ದಾಖಲಾಗಿದೆ.