ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮುಂಡಗೋಡು(Mundgod) : ಇಲ್ಲಿನ ಮಳಗಿ ಸಮೀಪದ ಅರಣ್ಯದಲ್ಲಿ ಸಿಕ್ಕ ರುಂಡವಿಲ್ಲದ ಮಹಿಳೆಯ ಮೃತದೇಹದ ಗುರುತು ಪತ್ತೆ ಮಾಡುವಲ್ಲಿ ಮುಂಡಗೋಡು ಪೊಲೀಸರು(Mundgod Police) ಯಶಸ್ವಿಯಾಗಿದ್ದಾರೆ.
ಮಳಗಿ ಗ್ರಾಮದ ಶಿವಕ್ಕ ಪಾಟೀಲ(75) ಎಂದು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಫೆಬ್ರವರಿ 20ರಂದು ಮಳಗಿ ಗ್ರಾ.ಪಂ(Malagi GP) ವ್ಯಾಪ್ತಿಯ ಕೊಳಗಿ ಗ್ರಾಮದ ಅರಣ್ಯದಲ್ಲಿ ರುಂಡ ಇಲ್ಲದ ಮಹಿಳೆಯೋರ್ವಳ ಬೆತ್ತಲೆ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ರುಂಡ ಇಲ್ಲದ ಮಹಿಳೆಯ ಗುರುತು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಬಗ್ಗೆ ಸ್ಥಳೀಯ ಜನರನ್ನ ವಿಚಾರಿಸುತ್ತಾ ಸಾಗಿದ್ದರು. ಗ್ರಾಮದಲ್ಲಿ ಮಹಿಳೆಯರು ಕಾಣೆಯಾಗಿದ್ದಾರೆಯೇ ಎಂಬ ಮಾಹಿತಿ ಪಡೆಯುತ್ತಾ ಸಾಗಿದರು. ಆದರೆ ಕಾಣೆಯಾದ(Missing) ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.
ಮಳಗಿ ಪೊಲೀಸ್ ಠಾಣೆ(Malagi Police Station) ಸಮಿಪವೇ ಮೃತ ಶಿವಕ್ಕ ಎಂಬುವವರ ಮನೆ ಇತ್ತು. ಹೆದ್ದಾರಿ ಸಮೀಪ ಗೂಡಂಗಡಿ ಇಟ್ಟುಕೊಂಡು ಒಂಟಿಯಾಗಿ ವಾಸಿಸುತ್ತಿದ್ದಳು ಶಿವಕ್ಕ ಕಾಣೆಯಾದ ಬಗ್ಗೆ ಕುಟುಂಬಸ್ಥರು ಪೊಲೀಸ ಠಾಣೆಯಲ್ಲಿ(Police Station) ಪ್ರಕರಣ ದಾಖಲು ಮಾಡಿರಲಿಲ್ಲ. ಕೊಲೆಯಾದ ಮಹಿಳೆ 35 ರಿಂದ 40 ವರ್ಷ ವಯಸ್ಸಿನ ಮಹಿಳೆ ಎಂದು ಅಂದಾಜು ಮಾಡಲಾಗಿದ್ದರಿಂದ ಸಂಬಂಧಿಕರಲ್ಲಿಯೂ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಶವದಲ್ಲಿದ್ದ ಲಿಂಗ (ಗುಂಡಗಡಗಿ) ಹಾಗೂ ಅದರ ಜೊತೆಗೆ ಇದ್ದ ಕೀಲಿಕೈ ಶಿವಕ್ಕನದೆ ಎಂದು ಕೊನೆಗೂ ದೃಢಪಡಿಸಲಾಗಿದೆ.
ಶಿವಕ್ಕಳಿಗೆ ಇಬ್ಬರು ಹೆಣ್ಣು ಮಕ್ಕಳು , ಓರ್ವ ಗಂಡು ಮಗನಿದ್ದಾನೆ. ಒಬ್ಬಳು ಕಾತೂರು ಇನ್ನೊಬ್ಬರು ಶಿರಸಿಯಲ್ಲಿ(Sirsi) ಪುತ್ರ ಯಲ್ಲಾಪುರದಲ್ಲಿ(Yallapur) ವಾಸವಿದ್ದಾರೆ ಎನ್ನಲಾಗಿದೆ. ರುಂಡ ಇಲ್ಲದ ಮಹಿಳೆಯ ಶವ ಸಿಕ್ಕ ನಂತರ ಶಿರಶಿಯಲ್ಲಿರುವ ಪುತ್ರಿ ತಾಯಿ ಶಿವಕ್ಕನಿಗೆ ಪೋನ್ ಕರೆ ಮಾಡಿದ್ದರು ತಾಯಿಯ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲ್ಲಿಲ್ಲ. ಅಲ್ಲದೆ ಸಿಕ್ಕ ಮಹಿಳೆಯ ಶವದಲ್ಲಿ ಗುಂಡಗಡಗಿ ( ಲಿಂಗ )ಹಾಗೂ ಅದರ ಜೊತೆಗೆ ಇದ್ದ ಮನೆಯ ಕೀಲಿ ಕೈ ಪತ್ತೆಯಾಗಿರುವ ವಿಷಯದ ಕೇಳಿ ಸಹೋದರಿಯರು ಮುಂಡಗೋಡ ಪೊಲೀಸರಿಗೆ(Mundgod Police) ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ನಂತರ ಕುಟುಂಬಸ್ಥರನ್ನು ಪೊಲೀಸರು ಕಾರವಾರಕ್ಕೆ ಕರೆ ತಂದು ಮಹಿಳೆಯ ಗುರುತು ಇದು ಮಾಡಲು ತಿಳಿಸಿದ್ದಾರೆ. ಪುತ್ರಿಯರು ತಮ್ಮ ತಾಯಿಯದೇ ಎಂದಿದ್ದರು. ಮಗನು ಕೂಡ ಕೆಲವು ಗುರುತುಗಳು ಹಾಗೂ ಕೆಲವು ವಸ್ತುಗಳು ನೋಡಿ ಇದು ನಮ್ಮ ತಾಯಿ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಸದ್ಯ ಮುಂಡಗೋಡು ಪೊಲೀಸರು(Mundgod Police) ಪೊಲೀಸರು ಡಿಎನ್ಎ(DNA) ಪರೀಕ್ಷೆಗೆ ಒಳಪಡಿಸಿದ್ದಾರೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ಬಳಿಕ ಮಳಗಿ ಗ್ರಾಮಕ್ಕೆ ತಂದು ಲಿಂಗಾಯತ(Lingayat) ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿದೆ.
ಮೃತದೇಹ ದೊರೆತು ಏಳು ದಿನವಾದರೂ ರುಂಡ ಮಾತ್ರ ಈವರೆಗೂ ಪತ್ತೆಯಾಗಿಲ್ಲ. ಆದರೇ ಈಕೆಯ ಕೊಲೆ ಮಾಡಿದ ಕೊಲೆಗಡುಕರು ಯಾರು, ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆಂಬುದು ಗೊತ್ತಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : ಮಾರಕಾಸ್ತ್ರಗಳೊಂದಿಗೆ ಕಳ್ಳತನಕ್ಕೆ ಯತ್ನಿಸಿದ್ದ ಗ್ಯಾಂಗ್ ಆರೆಸ್ಟ್.
