ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)  ಕಾರವಾರ(Karwar): ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆಯಿತು.

ಸಮಿತಿಯ ಅಧ್ಯಕ್ಷರಾಗಿ ಕೊಂಕಣವಾಹಿನಿ (Konkanvahini) ಪತ್ರಿಕೆಯ ಪ್ರಧಾನ ಸಂಪಾದಕ ದೀಪಕಕುಮಾರ್ ಶೇಣ್ವಿ, ಉಪಾಧ್ಯಕ್ಷರಾಗಿ ಪಬ್ಲಿಕ್ ಟಿವಿಯ(Public Tv) ಸುರೇಂದ್ರ ಕುಡಾಳಕರ್, ಕಾರ್ಯದರ್ಶಿಯಾಗಿ ನೀಲಿ ಸಾಗರ ಸಾಮ್ರಾಟ(Sagar Samrata) ಪತ್ರಿಕೆಯ ಪ್ರಧಾನ ಸಂಪಾದಕ ನಾಗೇಂದ್ರ ಖಾರ್ವಿ ಹಾಗೂ ಖಜಾಂಚಿಯಾಗಿ ಕೊಂಕಣವಾಹಿನಿ (Konkanvahini) ಪತ್ರಿಕೆಯ ಉಪಸಂಪಾದಕ ರವಿ ಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ವಸಂತಕುಮಾರ್ ಕತಗಾಲ, ಟಿ.ಬಿ. ಹರಿಕಾಂತ, ಗಣೇಶ ಹೆಗಡೆ, ಸುಭಾಸ ದೂಪದಹೊಂಡ, ದರ್ಶನ ನಾಯ್ಕ, ಅಶೋಕ್ ಪೂಜಾರಿ, ಎಸ್. ಎಸ್. ಸಂದೀಪಸಾಗರ, ಅವಿನಾಶ್ ಆಗೇರ್, ಗೌತಮ ಬಾಡಕರ್, ಗಿರೀಶ್ ಬಾಂದೇಕರ್, ಸಂತೋಷ ಗುರುಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.