ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಮಟಾ ತಾಲೂಕಿನ ಮೂರೂರು ಗುಡ್ಡದ ಕಾಗಾಲ ಮಾನೀರ ಬಳಿ ಈ ದಾಳಿ ನಡೆಸಲಾಗಿದೆ. ಈ ವೇಳೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಹೋಟೆಲ್ ಕೆಲಸಗಾರ ಪ್ರಾಂಕ್ಲಿನ್ ಅಂಬೋಜ್ ಡಿಸೋಜಾ(21), ಕೋಳಿ ಫಾರ್ಮ್ ಕೆಲಸಗಾರ ನಿಖೀಲ ಪರಶುರಾಮ ಸಾವಂತ(26) ಹಾಗೂ ಕೂಲಿ ಕಾರ್ಮಿಕ ಮಧುಕೇಶ್ವರ ಜೈ ಬಾದೂರ ಕಾರ್ಗಿ(29) ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಪೊಲೀಸರು ಲಕ್ಷ ರೂ. ಮೌಲ್ಯದ ಸುಮಾರು 3 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸ್ಕೂಟಿ ಹಾಗೂ 2 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿದ್ದಾರೆ. ಗಾಂಜಾ ಸಾಗಾಟ ಹಾಗೂ ಮಾರಾಟಗಾರರ ಜಾಲವನ್ನು ಭೇದಿಸುವ ಉದ್ದೇಶದಿಂದ ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ. ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಪಿಎಸ್ಐ ಮಯೂರ ಪಟ್ಟಣಶೆಟ್ಟಿ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ಸಂತೋಷ ಚಿನ್ನಣ್ಣನವರ, ಪ್ರದೀಪ ನಾಯಕ ಮತ್ತು ದಯಾನಂದ ನಾಯ್ಕ ಅವರನ್ನೊಳಗೊಂಡ ತಂಡವು ಈ ಕಾರ್ಯಾಚರಣೆ ನಡೆಸಿದೆ.
ಆರೋಪಿಗಳ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆದಿದೆ.
ಇದನ್ನು ಓದಿ : ಕಾರವಾರ ನಗರದಲ್ಲಿ ಬಿದ್ದ ಬಾರೀ ಗಾತ್ರದ ಮರದ ಟೊಂಗೆ. ತಪ್ಪಿದ ದುರಂತ.
ಅಬಕಾರಿ ಕಾರ್ಯಾಚರಣೆ. ಮೂರು ಪ್ರಕರಣ. ಬೈಕ್ ನವರು ಎಸ್ಕೇಪ್, ಕಾಲ್ನಡಿಗೆ ಮಹಿಳೆ ವಶಕ್ಕೆ.
