ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹೊನ್ನಾವರ(Honnavar) : ತಾಲ್ಲೂಕಿನ ಹೆರಂಗಡಿ(Herangadi) ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ(NH 69) ಸಂಭವಿಸಿದ  ಭೀಕರ ರಸ್ತೆ ಅಪಘಾತ ಚಾಲಕನೋರ್ವ ಸಾವನ್ನಪ್ಪಿದ್ದಾನೆ.

ಭಟ್ಕಳದಿಂದ ಸಿದ್ದಾಪುರ(Bhatkal to Siddapura) ಕಡೆಗೆ ತೆರಳುತ್ತಿದ್ದ ಓಮ್ನಿ ವಾಹನ ಹಾಗೂ ಗೇರುಸೊಪ್ಪಕ್ಕೆ(Gerudoppa) ಹೋಗಿ ಹಿಂದಿರುಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್(KSRTC Bus) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ತೀವ್ರತೆಗೆ ಓಮ್ನಿ ವಾಹನ(Omni Vehicle) ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮೃತ ಸಿದ್ದಾಪುರ ಮೂಲದವರು(Siddapura Native) ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ಸುದ್ದಿ ತಿಳಿದು ಹೊನ್ನಾವರ ಪೊಲೀಸರು(Honnavar Police) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಸಂದರ್ಭದಲ್ಲಿ   ಕೆಲ ಕಾಲ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ (Honnavar Police Station) ಪ್ರಕರಣ ದಾಖಲಾಗಿದ್ದು ಈ ಸಂಬಂಧ ತನಿಖೆ ಮುಂದುವರಿದಿದೆ.

ಇದನ್ನು ಓದಿ : ಕಾರವಾರದಲ್ಲಿ‌ ಸತ್ಯಸಾಯಿ‌ಸೇವಾ ಸಂಸ್ಥೆ ಆಯೋಜಿಸಿದ  ಏಕತಾ ಓಟ ಮತ್ತು ಸೈಕಲ್ ಸವಾರಿಯಲ್ಲಿ‌ ಪಾಲ್ಗೊಂಡ ‌ಸಾವಿರಾರು ಮಂದಿ.

ಭೀಕರ ಅಪಘಾತ — ಮೂವರು ಸಬ್ ಇನ್ಸಪೆಕ್ಟರ್  ಗಳು ಸ್ಥಳದಲ್ಲೇ ಸಾವು, ಇಬ್ಬರಿಗೆ  ಗಂಭೀರ ಗಾಯ

ಹೊನ್ನಾವರದ ಹಾಡಗೇರಿಯಲ್ಲಿ ಘಟನೆ. ಏರಗನ್ ಗುಂಡು ಸಿಡಿದು ಯುವಕ ಮೃತ್ಯು.