ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ ನ್ಯಾಯಾಲಯವು 25 ಸಾವಿರ ರೂ. ದಂಡ(Fine) ವಿಧಿಸಿದೆ.

  KA 47/  EA1949 ನೋಂದಣಿಯ ವಾಹನವನ್ನ  ಚಾಲನೆಗೆ  ಅವಕಾಶ ಮಾಡಿಕೊಟ್ಟ ನ್ಯಾಷನಲ್ ಕಾಲೋನಿಯ ಸೀಮಾ ಅಖ್ತರ್ ಶೇಖ್ ಮೋಹಿದ್ದಿನ್ ಶಿರೂರ್ ಈತನಿಗೆ ದಂಡ ವಿಧಿಸಲಾಗಿದೆ.

ಮುರ್ಡೇಶ್ವರ ಠಾಣಾ(Murdeshwar Station) ಪಿಎಸ್ಐ ಹನುಮಂತ ಬಿರಾದಾರ ರವರು ಕಲಂ 5 ಸಹಿತ 199(a) IMV ACT ಪ್ರಕಾರ ವಾಹನದ ಮಾಲೀಕರ ಮೇಲೆ  ಭಟ್ಕಳ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ   ದೋಷಾರೋಪಣೆ  ಸಲ್ಲಿಸಿದ್ದರು.  ಮಾನ್ಯ ನ್ಯಾಯಾಲಯವು ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ  ಸೀಮಾ  ಅಖ್ತರ್ ಶೇಖ್ ಮೋಹಿದ್ದಿನ್ ಗೆ 25,000 ರೂಪಾಯಿ ದಂಡವನ್ನು   ವಿಧಿಸಿ ಆದೇಶಿಸಿದೆ.

ಇದನ್ನು ಓದಿ : ಪ್ರಮಾಣವಚನ ಸ್ವೀಕರಿಸಿದ ಡಿ ಕೆ ಶಿ ಯುಗಾರಂಭ. ಉಪಮುಖ್ಯಮಂತ್ರಿಯಾಗಿ ಡಾ ಜಿ ಪರಮೇಶ್ವರ.