ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಅಂಕೋಲಾ(Ankola) : ಕಾರವಾರದಿಂದ ಉಡುಪಿ(Karwar to Udupi) ಕಡೆ ತೆರಳುತ್ತಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್(U T Khadar) ಅವರ ಬೆಂಗಾವಲು ವಾಹನಕ್ಕೆ(Escort Vehicle) ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66(NH 66) ವರದರಾಜ್ ಹೋಟೆಲ್ ಸಮೀಪ ನಡೆದಿದೆ.

ಸಚಿವರನ್ನು ಎಸ್ಕಾರ್ಟ್ ಮಾಡಿಕೊಂಡು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅಲಗೇರಿ(Alageri) ಮೂಲದ ಸಂದೀಪ್ ನಾಯಕ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಸಚಿವ ಯು.ಟಿ. ಖಾದರ್(U T Khadar) ಅವರು  ವಾಹನ ನಿಲ್ಲಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ, ಅವರನ್ನು ತಕ್ಷಣ ಅಂಕೋಲಾ(Ankola) ಪಟ್ಟಣದ ಆರ್ಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿ ಮುಂದೆ ಸಾಗಿದ್ದಾರೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅಂಕೋಲಾ ಪೊಲೀಸ್ ಠಾಣಾ(Ankola Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು,  ತನಿಖೆ ನಡೆಸಲಾಗಿದೆ.