ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಹಿಂದುಗಳ‌ ಶ್ರದ್ದಾ ಕೇಂದ್ರವಾಗಿರುವ  ಮುರಿನಕಟ್ಟೆ(Murinakatte) ಮರು ನಿರ್ಮಾಣಕ್ಕಾಗಿ ಆಗ್ರಹಿಸಿ ಶುಕ್ರವಾರ  ಹಿಂದು ಸಂಘಟನೆಗಳ(Hindu Sanghatanas) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಚೆನ್ನಪಟ್ಟಣ ಶ್ರೀ ಹನುಮಂತ ದೇವಾಲಯದಿಂದ(Chennapttana Sri Hanumanth Temple) ಹೊರಟ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಾಗಿದರು. ಹೂವಿನಪೇಟೆ, ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿ ಮೂಲಕ ಮಿನಿ ವಿಧಾನ ಸೌಧದವರೆಗೆ ಮೆರವಣಿಗೆ ನಡೆಸಿದರು.

ಮೇ 29ರಂದು ನಿರ್ಮಿಸಿದ ಕಟ್ಟೆ ಧ್ವಂಸ ಮಾಡಿದ ಮತಾಂಧ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರೆ ನೀಡಿದ ಸ್ವಯಂಪ್ರೇರಿತ ಬಂದ್ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಯಿತು. . ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯ ಹಿಂದು ಕಾರ್ಯಕರ್ತರು(Hindus workers) ಘೋಷಣೆ ಕೂಗುತ್ತಾ  ಆಕ್ರೋಶ ವ್ಯಕ್ತಪಡಿಸಿದರು.

ಮುರಿನಕಟ್ಟೆ ದ್ವಂಸ ಮಾಡಿ  ಪೊಲೀಸ್ ಅಧಿಕಾರಿಗಳ(Police Officers) ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಹೆದ್ದಾರಿ ತಡೆ ನಡೆಸಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಾಗ್ಮಿ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಚಾಲಕ ಹಿಂದು  ಶ್ರೀಕಾಂತ ಶೆಟ್ಟಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಯಾವುದೇ ಕಾರಣದಿಂದಲೂ ಮತಾಂಧ ಶಕ್ತಿಯನ್ನ ಧಮನ ಮಾಡಬೇಕಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಮತಾಂಧರು ಅಟ್ಟಹಾಸ ಮೆರೆದಿದ್ದಾರೆ. ಹೀಗಾಗ ಸಮಾಜಘಾತುಕ ಶಕ್ತಿಗಳ ನಿರ್ನಾಮವಾಗಬೇಕಾಗಿದೆ. ಹಿಂದುಗಳ ಶ್ರದ್ಧಾಕೇಂದ್ರ ಮುರಿನಕಟ್ಟೆ ಪುನರ್ನಿರ್ಮಾಣವಾಗಬೇಕೆಂದು ಹೇಳಿದರು.

ಹಿಂದು ಜಾಗರಣಾ ವೇದಿಕೆಯ ಪುಂಡಲಿಕ ದಳವಾಯಿ ಮಾತನಾಡಿ, ಭಟ್ಕಳದ ಹಿಂದುಗಳ ಜೊತೆಗೆ ರಾಜ್ಯದ ಹಿಂದು ಸಂಘಟನೆಗಳಿವೆ. ಮುಂದೆ  ಮುರಿನಕಟ್ಟೆ  ಮರು ನಿರ್ಮಾಣವಾಗದಿದ್ದಲ್ಲಿ  ಭಟ್ಕಳ ಚಲೋ ನಡೆಸುತ್ತೇವೆಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ,  ಗೋವಿಂದ ನಾಯ್ಕ, ಸುನೀಲ್ ನಾಯ್ಕ, ಈಶದವರ ನಾಯ್ಕ, ಶ್ರೀನಿವಾಸ ನಾಯ್ಕ ಸೇರಿದಂತೆ ಇತರ ಹಿಂದು ಸಂಘಟನೆ ಪ್ರಮುಖರು ಉಪಸ್ಥಿತರಿದ್ದರು. ಪ್ರತಿಭಟನೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇದನ್ನು ಓದಿ : ಸರ್ಕಾರದ ಫಸ್ಟ್ ವಿಕೆಟ್ ಔಟ್. ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ.