ಕಾರವಾರ karwar :  ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಮುಖ್ಯಮಂತ್ರಿ ಬಳಿ ಚರ್ಚೆಯೇ ನಡೆಸಿಲ್ಲ ಎಂದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌ ವಿ ದೇಶಪಾಂಡೆ (Deshapande )ಹೇಳಿದ್ದಾರೆ.

ಕಾರವಾರದಲ್ಲಿ ಮಾದ್ಯಮಗಳ ಜೊತೆ ಆರ್.ವಿ.ದೇಶಪಾಂಡೆ ಮಾತನಾಡಿದರು. ಸಚಿವ ಸ್ಥಾನದ ಬಗ್ಗೆ ನಾನೇನು ವಿಚಾರ ಮಾಡಿಲ್ಲ, ತಲೆ ಕೆಡಿಸಿಕೊಂಡಿಲ್ಲ ಎಂದ ಅವರು ಸಚಿವ ಸ್ಥಾನ ಖಾಲಿ ಆಗುತ್ತಿರುತ್ತವೆ, ತುಂಬುತ್ತಿರುತ್ತವೆ ಎಂದರು.

ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕೆ ನನ್ನ ಹೆಸರು ಚರ್ಚೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಅನಗತ್ಯ ಚರ್ಚೆಯನ್ನ ಕೈಬಿಡುವುದು ಒಳ್ಳೆಯದು.  ಅವಕಾಶ ಸಿಕ್ಕರೆ ಮತ್ತೆ ಸಚಿವನಾಗುವ ವಿಚಾರ ಮಾಡುತ್ತೇನೆ. ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಎನ್ನುತ್ತಾರೆ ಎಂದ ನಗೆ ಚಟಾಕಿ ಹಾರಿಸಿದರು.

ಹಿರಿತನ, ಬುದ್ಧಿಮತ್ತೆ, ಚಾರಿತ್ರ್ಯ ಪರಿಗಣಿಸುವುದಾದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು.ಈ ಎಲ್ಲ ಅಂಶಗಳು ಈಗ ಪರಿಗಣನೆಗೆ ಉಳಿದಿಲ್ಲ. ಯಾವ ಸಮಯದಲ್ಲಿ ಏನಾಗಬೇಕೋ ಅದು ಆಗುತ್ತದೆ, ತಾಳ್ಮೆ ಇರಬೇಕು. ತಾಳ್ಮೆ ಇದ್ದವರು ಜೀವನದಲ್ಲಿ ಗೆಲ್ಲುತ್ತಾರೆ. ಮುಖ್ಯಮಂತ್ರಿಗಳು ಬೇರೆ ಬೇರೆ ಪ್ರಯೋಗ ಮಾಡಿ ನೋಡುತ್ತಾರೆ.

ದೇಶಪಾಂಡೆ ಸಚಿವನಿದ್ದಾಗ ಏನಾಗಿತ್ತು?  ಈಗ ಮಂಕಾಳು ವೈದ್ಯ (mankal Vaidya )ಇದ್ದಾಗ ಏನಾಗುತ್ತಿದೆ ನೋಡಬೇಕಲ್ವಾ ಎಂದು  ಆರ್.ವಿ.ದೇಶಪಾಂಡೆ ಹೇಳಿದ್ದಾರೆ.