ಕಾರವಾರ(KARWAR) : ಮುಖ್ಯಮಂತ್ರಿ ಸಿದ್ದರಾಮಯ್ಯ(SIDDARAMAIHA) ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ಸಂಜೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(VISHWESHAR HEGADE KAGERI) ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,  ಸಂವಿಧಾನದ ಬಗ್ಗೆ ಗೌರವ ಇದ್ರೆ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು.  ಸಿದ್ಧರಾಮಯ್ಯ ರಾಜ್ಯದ ಜನತೆ ತಲೆತಗ್ಗಿಸುವಂತೆ ಭ್ರಷ್ಟಾಚಾರ ಮಾಡಿದ್ದಾರೆ. ತನಿಖೆಗೆ ಕೋರ್ಟ್ ಅವಕಾಶ ನೀಡಿದಾಗಲೂ ಸಿದ್ಧರಾಮಯ್ಯ ಮೊಂಡುತನ ಪ್ರದರ್ಶಿಸುವುದು ಸರಿಯಲ್ಲ ಎಂದ ಕಾಗೇರಿ, ಇದು ಅವರ ಹಿರಿತನಕ್ಕೆ, ಅನುಭವಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತದ್ದಲ್ಲ ಎಂದರು.

ಸಿದ್ಧರಾಮಯ್ಯ ಅವರೇ ನಿಮ್ಮ ಜೊತೆಗಾರರ ಸಲಹೆ, ಸೂಚನೆ ಮಾತನ್ನ ಕೇಳಬೇಡಿ. ಸಾರ್ವಜನಿಕ ಜೀವನದಲ್ಲಿ ಸುಧೀರ್ಘ ಅನುಭವ ಇದ್ದರೂ ರಾಜೀನಾಮೆ ನೀಡದಿರೋದು ಸರಿಯಲ್ಲ. ಇನ್ನೂ ಮೊಂಡತನ ಮಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕಾಗೇರಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ(ROOPALI NAIK) ನಾಯ್ಕ, ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ನಾಗರಾಜ್ ನಾಯಕ, ಗೋವಿಂದ್ ನಾಯ್ಕ, ರಾಜೇಂದ್ರ ನಾಯ್ಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಇದನ್ನು ಓದಿ : ಸಿಕ್ಕಿ ಬಿದ್ದ ಪಟ್ಟಣ ಪಂಚಾಯತ್ ಸದಸ್ಯನಿಗೆ ಜೈಲು

ಎರಡು ಹುದ್ದೆ ಅನುಭವಿಸಿದ ಉಷಾ ಹೆಗಡೆಗೆ ಶಿಕ್ಷೆ

ಸಿದ್ದರಾಮಯ್ಯ ಗೆ ಮುಂದುವರಿದಿದೆ ಸಂಕಷ್ಟ

ಉದ್ಯಮಿ ಹತ್ಯೆ ಆರೋಪಿಗಳ ಕಾರು ಬೆನ್ನತ್ತಿದ ಪೊಲೀಸರು