ನವದೆಹಲಿ: ನಿನ್ನೆ ಮೊನ್ನೆಯವರೆಗೂ ರಾಜಕೀಯವಾಗಿ ತೀವ್ರವಾದ ಟೀಕೆ ಮಾಡಿಕೊಳ್ಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ Narendra modi ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Rahul Gandhi ಪರಸ್ಪರ ಕೈ ಕುಲುಕಿಕೊಂಡ ವಿದ್ಯಮಾನ 18ನೇ ಲೋಕಸಭೆಯಲ್ಲಿ ಸ್ಪೀಕರ್ ಆಯ್ಕೆ ವೇಳೆ ನಡೆದಿದೆ.

ಬುಧವಾರ ಹೊಸದಾಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಸ್ಪೀಕರ್ ಹುದ್ದೆಗೆ ತರುವಂತೆ ಹಂಗಾಮಿ ಸ್ಪೀಕರ್ ಭರ್ತಿಹರಿ ಮಹತಾಬ್ ಅವರು ಕೇಳಿಕೊಂಡರು. ಇದರೊಂದಿಗೆ ಪ್ರಧಾನಿ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಒಂಬಿರ್ಲಾ ಕುಳಿತಿದ್ದ ಆಸನಕ್ಕೆ ತೆರಳಿ ಅಭಿನಂದಿಸಿ ಸ್ಪೀಕ‌ರ್ ಆಸನಕ್ಕೆ ಕರೆದೊಯ್ದರು.

ಈ ಸಂದರ್ಭದಲ್ಲಿ ಓಂ ಬಿರ್ಲಾ (Om Birla )ಪಕ್ಕದಲ್ಲಿ ನಿಂತಿದ್ದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಹಸ್ತಲಾಘವ ಮಾಡಿದರು. ಮೋದಿ ಕೂಡ ಮುಗುಳ್ನಗುತ್ತಾ ರಾಹುಲ್ ಜೊತೆ ಕೈಕುಲುಕಿದರು. ಬಳಿಕ ಓಂ ಬಿರ್ಲಾ ಅವರನ್ನು ಸ್ಪೀಕ‌ರ್ ಸ್ಥಾನಕ್ಕೆ ಕರೆದುಕೊಂಡು ಹೋಗಲಾಯಿತು.

ರಾಹುಲ್ ಮೋದಿಯವರು ಪರಸ್ಪರ ಹಸ್ತಲಾಘವ ಮಾಡಿಕೊಂಡಾಗ ಸದಸ್ಯರೆಲ್ಲರೂ ಒಂದು ಕ್ಷಣ ಅವಕ್ಕಾದರು. ನಿನ್ನೆಯವರೆಗೂ ರಾಜಕೀಯವಾಗಿ ಪರಸ್ಪರ ಕಾಲೇಳೆದು ಟೀಕೆ ಮಾಡಿಕೊಳುತ್ತಿದ್ದ ಉಭಯ ನಾಯಕರು ನಗುತ್ತಲೇ ಕೈಕೊಟ್ಟಾಗ ಎಲ್ಲರೂ ಆಶ್ಚರ್ಯಗೊಳ್ಳುವಂತಾಯಿತು .

18ನೇ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತ ಅಪರೂಪದ ದೃಶ್ಯ ದಾಖಲಾಯಿತು.

ಕಳೆದ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಪರಸ್ಪರ ಟೀಕೆ ಮಾಡಿಕೊಳ್ಳುತ್ತಲೆ, ಚುನಾವಣೆಯ ಬಳಿಕವೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಟೀಕೆಗಳು ಮುಂದುವರಿದುಕೊಂಡು ಬಂದಿದ್ದವು. ಆದರೆ ಲೋಕಸಭೆಯಲ್ಲಿ ಉಭಯ ನಾಯಕರು ಹಸ್ತ ಲಾಘವ ಮಾಡಿರುವುದು ಅಚ್ಚರಿಗೆ ಕಾರಣವಾಯಿತು.

18 ನೇ ಲೋಕಸಭೆಯಲ್ಲಿ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿದಿತ್ತು.  ಎನ್‌ಡಿಎ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದರೊಂದಿಗೆ ಸ್ಪೀಕ‌ರ್ ಆಯ್ಕೆಗೆ ಇಂಡಿಯಾ ಮೈತ್ರಿಕೂಟ ಪರವಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.  ಅಂತಿಮವಾಗಿ ಎನ್‌ಡಿಎಯಿಂದ ನಾಮನಿರ್ದೇಶನಗೊಂಡ ಒಂಬಿರ್ಲಾ ಧ್ವನಿ ಮತದ ಮೂಲಕ ಸ್ಪೀಕರ್ ಆಗಿ ಆಯ್ಕೆಯಾದರು.