ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ (Bhatkal): ತಾಲೂಕಿನ ಶಕ್ತಿ ಸ್ಥಳಗಳಲ್ಲಿ ಒಂದಾದ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಿಯ(Sri Durgaparameshwari Devi) ಸಾನ್ನಿಧ್ಯದಲ್ಲಿ ಬಾರೀಯ ನವರಾತ್ರಿ ಆಚರಣೆಗೆ ಭರದ ಸಿದ್ದತೆ ಮಾಡಿಕೊಳ್ಳಲಾಗಿದೆ.
ದಿನಾಂಕ 11-10-2026 ರಿಂದ 20-10-2026 ಮಂಗಳವಾರದವರೆಗೆ ನವರಾತ್ರಿ(Navaratri) ಪ್ರಯುಕ್ತ ವಿಶೇಷ ಪೂಜೆ, ಚಂಡಿಕಾ ಹೋಮ, ದುರ್ಗಾಶಾಂತಿ ಹೋಮ ಮತ್ತು ಅನ್ನಸಂತರ್ಪಣೆ ಕಾರ್ಯವನ್ನು ಇಟ್ಟುಕೊಳ್ಳಲಾಗಿದೆ. ಹೀಗಾಗಿ ದೇವಾಲಯ ಆಡಳಿತ ಮಂಡಳಿಯಿಂದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಉತ್ಸವಕ್ಕೆ ಹೊರೆ ಕಾಣಿಕೆ ನೀಡಲು ಇಚ್ಚಿಸುವ ಭಕ್ತರು ದಿನಾಂಕ : 10-10-2026ರ ಒಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ. ದೇವಾಲಯದಲ್ಲಿ ನಡೆಯುವ ನವರಾತ್ರಿಯ ಎಲ್ಲಾ ದಿನಗಳ ದೇವತಾ ಕಾರ್ಯಗಳಲ್ಲಿ ಭಕ್ತರು ಭಾಗವಹಿಸಿ ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ (Sri Durgaparameshwari Management) ವಿನಂತಿಸಿಕೊಂಡಿದೆ.