ಕಾರವಾರ(Karwar) : ನಗರದ ಮಾರುತಿ ದೇವಸ್ಥಾನದ ಜಾತ್ರೆಯ(Maruti temple Jaatra) ಪ್ರಸಾದದ ಬಟ್ಟಲು ಬರೋಬ್ಬರಿ ಈ ಬಾರೀ ಮೂರುವರೆ ಲಕ್ಷ ರೂ.ಗೆ ಹರಾಜಾಗಿದೆ.
ದೇವಸ್ಥಾನ ಇತಿಹಾಸದಲ್ಲಿ(Temple History) ಅತಿ ಹೆಚ್ಚು ಮೊತ್ತಕ್ಕೆ ಪ್ರಸಾದದ ಬಟ್ಟಲು (Prasada Plate) ಹರಾಜಾಗಿದ್ದು, ಗೋವಾ ಮೂಲದ(Goa Native) ಹಾಲಿ ದುಬೈನಲ್ಲಿರುವ(Dubai) ಅನಮೋಲ್ ಬಾಂದೇಕರ್ ಎಂಬುವವರು ಪ್ರಸಾದದ ಬಟ್ಟಲು ಪಡೆದರು. ಅನಮೋಲ್ ಅವರ ತಾಯಿ ಕಾರವಾರ ಮಾರುತಿ ಗಲ್ಲಿ(MarutiGalli) ಮೂಲದವರಾಗಿದ್ದರು.
ಡಿಸೆಂಬರ್ 28, 29 ಶನಿವಾರ ಹಾಗೂ ಭಾನುವಾರ ಜಾತ್ರೆ ವಿಜೃಂಬಣೆಯಿಂದ ನಡೆಯಿತು. ಭಾನುವಾರ ಜಾತ್ರೆಗೆ ಹರಕೆಯಾಗಿ ಬಂದ ಸಾಮಗ್ರಿಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಸಲಾಯಿತು. ಕಳೆದ ವರ್ಷ 2.25 ಲಕ್ಷ ರೂ.ಗೆ ಬಟ್ಟಲು ಹರಾಜಾಗಿತ್ತು. ಅದಕ್ಕೂ ಹಿಂದೆ 2 ಲಕ್ಷ ರೂ.ಗೆ ಹರಾಜಾಗಿತ್ತು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದಲ್ಲಿ ಬಟ್ಟಲು ಹರಾಜಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಖಚಿತಪಡಿಸಿದೆ.
ಕಾರವಾರದ ಶ್ರೀ ಮಾರುತಿ ದೇವಸ್ಥಾನಕ್ಕೆ ಮುಂಬೈ(Mumbai), ಗೋವಾ(Goa), ಅಮೆರಿಕ(America), ಆಸ್ಟ್ರೇಲಿಯಾ(Austrelia) ಹೀಗೆ ವಿವಿಧೆಡೆಯ ಭಕ್ತರಿದ್ದಾರೆ. ಇಲ್ಲಿ ನಡೆಯುವ ಗಣೇಶ ಉತ್ಸವ ಮತ್ತು ಜಾತ್ರೆಗೆ ಭಕ್ತರು ಬರುತ್ತಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ರಾಜನ್ ಮಾಪ್ಸೆಕರ್ ಹೇಳಿದ್ದಾರೆ.
ಇದನ್ನು ಓದಿ : ಹೊನ್ನಾವರದಲ್ಲಿ ಬೆಳಂಬೆಳಿಗ್ಗೆ ಭೀಕರ ಅಪಘಾತ. ಮೂವರ ದುರ್ಮರಣ.
ಕೋಟಿಗಟ್ಟಲೆ ಆಸ್ತಿ ಇದ್ದರೂ ವೃದ್ಧಾಶ್ರಮದಲ್ಲಿ ಹಿರಿಯ ಸಾಹಿತಿ ಕೊನೆಯುಸಿರು.