ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ ಶಿರಸಿ ವತಿಯಿಂದ ನೀಡಲಾಗುವ 2024-25 ನೇ ಸಾಲಿನ ಪ್ರಶಸ್ತಿಗೆ ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘವು “ಉತ್ತಮ ಮೀನುಗಾರರ ಸಹಕಾರಿ ಸಂಘ” ಎಂಬ ಪ್ರಶಸ್ತಿಗೆ ಭಾಜನವಾಗಿದೆ.

ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಆಯ್ಕೆ ಮಾಡಲಾಗಿದೆ.  73 ನೇ ಸಹಕಾರ ಸಪ್ತಾಹದ ಅಂಗವಾಗಿ  ಇತ್ತೀಚೆಗೆ ನಡೆದ ಶಿರಸಿಯ ಬ್ಯಾಂಕಿನ ಪ್ರಧಾನ ಕಚೇರಿಯ ಸುಂದರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ನೀಡಲಾಯಿತು.

 ಪ್ರಶಸ್ತಿಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ವಿಠ್ಠಲ ಎಸ್. ದೈಮನೆ ಅಳ್ವೆಕೋಡಿ ಉಪಾಧ್ಯಕ್ಷ ಮಂಜು ಕುಪ್ಪ ಹರಿಕಂತ್ರ ಮಠದಹಿತ್ಲು ಹಾಗೂ ಮುಖ್ಯಕಾರ್ಯನಿರ್ವಾಹಕರು ಸ್ವೀಕರಿಸಿದರು. ಹಾಗೂ ಆಡಳಿತ ಮಂಡಳಿ ಸದಸ್ಯರಾದ  ಮಂಜುನಾಥ ಭೈರಾ ಮೊಗೇರ ಶಿರಾಲಿಕೇರಿ, ಸುಬ್ರಾಯ ಮೊಗೇರ ಸಣಬಾವಿ ಹಾಗೂ  ಅಂತೋನ್ ಜುವಾಂವ ಡಿಕೋಸ್ತ ರವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಡಿ.ಸಿ.ಸಿ. ಶಿರಸಿ ಬ್ಯಾಂಕಿನ ಅಧ್ಯಕ್ಷರು, ಮಾಜಿ ಸಚಿವರು, ಹಾಲಿ ಯಲ್ಲಾಪುರ ಮುಂಡಗೋಡು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಈ ಎಲ್ಲಾ ಸಾಧನೆಗಳಿಗೆ ನಿರ್ದೇಶಕ ಮಂಡಳಿಯ ಸಮಯೋಜಿತ ನಿರ್ಧಾರಗಳು, ಸಿಬ್ಬಂದಿಗಳು, ಶೇರುದಾರರ ಹಾಗೂ ಗ್ರಾಹಕರ ಸಹಕಾರವೇ ಕಾರಣ ಎಂದು ಬ್ಯಾಂಕಿನ ಅಧ್ಯಕ್ಷ ವಿಠ್ಠಲ ಎಸ್. ದೈಮನೆ ಅಳ್ವೆಕೋಡಿ ಅವರು ತಿಳಿಸಿದ್ದಾರೆ.