ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಮುಂಡಗೋಡ(Mundgod) : ತಂಪು ಪಾನೀಯ ಎಂದು ಮನೆಯ ಹಿತ್ತಲಲ್ಲಿ ಇಟ್ಟಿದ್ದ ಕಳೆನಾಶಕವನ್ನು  ಸೇವಿಸಿದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ  ಸಾವನ್ನಪ್ಪಿದ ಘಟನೆ ನಡೆದಿದೆ.

ಮುಂಡಗೋಡು(Mundgod) ತಾಲೂಕಿನ ಕಿಲ್ಲೆ ಓಣಿಯ ಮೌಲಾಲಿ ಗೌಸಮಿಯ ಬನ್ನುರು (52) ಮೃತಪಟ್ಟ ದುರ್ದೈವಿ. ಅ. 8ರಂದು ಸಂಜೆ ಮೌಲಾಲಿ ಮನೆಯ ಹಿತ್ತಲಲ್ಲಿ ಕಸ ತೆಗೆಯುತ್ತಿದ್ದ ವೇಳೆ ಹಸಿರು  ಬಾಟಲಿಯಲ್ಲಿ ಇದ್ದ ಬಾಟಲಿಯಲ್ಲಿ  ತಂಪುಪಾನೀಯ ಇದೆಯೆಂದು ಅದನ್ನ ಆಕಸ್ಮಿಕವಾಗಿ ಸೇವಿಸಿದ್ದರು ಎನ್ನಲಾಗಿದೆ.

ಕೆಲ ಹೊತ್ತಿನಲ್ಲಿ ಅಸ್ವಸ್ಥಗೊಂಡ ಅವರನ್ನು ಮುಂಡಗೋಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ(Hubli) ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ  ಸಂಜೆ ಸುಮಾರಿಗೆ ಮೃತಪಟ್ಟಿದ್ದಾರೆ.

ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತರ ಪುತ್ರ ಹಜರೆಸಾಬ ಬನ್ನುರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮುಂಡಗೋಡ(Mundgod) ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.