ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) :  ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಂಗಾರ‌(Gold) ಮತ್ತು ಬೆಳ್ಳಿಯ(Silver) ಆಭರಣ ಹಾಗೂ ನಗದನ್ನು ಕಳುವು (Theft) ಮಾಡಿದ ಘಟನೆ ನಗರದ ಮಾರುತಿ ನಗರದಲ್ಲಿ  ನಡೆದಿದೆ.

ಮಾರುತಿ ನಗರದ ಮಹಮ್ಮದ್ ರಫೀಕ್ ಪಟೇಲ್ ಎಂಬವರು ವಾಸವಿರುವ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದೆ. ಮಹಮ್ಮದ್ ರಫೀಕ್ ಪಟೇಲ್ ಅವರು ಕುಟುಂಬ ಸಮೇತರಾಗಿ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದ ಕಳ್ಳರು ಮನೆಯ ಹಿಂಬದಿಯ ಬಾಗಿಲ ಚಿಲಕ ಮುರಿದು, ಮನೆಯ ಒಳಗಡೆ ಹೊಕ್ಕಿದ್ದಾರೆ.  ಮನೆಯಲ್ಲಿದ್ದ ಮೂರು ಕಪಾಟಿನ‌ ಬಾಗಿಲನ್ನು ಒಡೆದು, ಕಪಾಟಿನಲ್ಲಿದ್ದ 15 ಗ್ರಾಂ ತೂಕದ ಬಂಗಾರದ ಆಭರಣ,  25 ಸಾ. ರೂ ಮೌಲ್ಯದ ಬೆಳ್ಳಿಯ ಆಭರಣ, ಟಿವಿ ಮತ್ತು ಮಕ್ಕಳು ಹಣ ಸಂಗ್ರಹಿಸಿಟ್ಟಿದ್ದ ಮೂರ್ನಾಲ್ಕು ಕಾಯಿನ್ಸ್ ಡಬ್ಬಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ದಾಂಡೇಲಿ ನಗರ ಠಾಣೆಯಲ್ಲಿ (Dandeli Town Station) ದೂರನ್ನು ದಾಖಲಾಗಿದ್ದು ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧ. ಜಿಲ್ಲಾಧಿಕಾರಿ ಆದೇಶ.

ಈಕೆ ಕೋಟಿ ಒಡತಿ. ಹೆರಾಯಿನ್ ಸಾಗಾಟದಲ್ಲಿ ಸಿಕ್ಕಿಬಿದ್ದ ಲೇಡಿ ಕಾನ್‌ಸ್ಟೇಬ