ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ತಮಿಳುನಾಡು(Tamilunadu): ಖೈದಿಯೊಬ್ಬ(Prisoners) ಮೂರ್ಚೆ ರೋಗ  ಬಂದಂತೆ ನಾಟಕವಾಡಿ ಒಟ್ಟು 17 ಖೈದಿಗಳು ಓಡಿಹೋಗಲು ಕಾರಣರಾದ ಘಟನೆ ತಮಿಳುನಾಡಿನ(Tamilunadu) ಥೇನಿ ಜಿಲ್ಲೆಯ ತೆಕ್ಕಂಪಟ್ಟಿ ಉಪ-ಜೈಲಿನಲ್ಲಿ ಸಂಭವಿಸಿದೆ.

ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಜೈಲು ಸಿಬ್ಬಂದಿ ಕೊಠಡಿಯ ಬಾಗಿಲು ತೆಗೆಯುತ್ತಿದ್ದಂತೆ ಸಿಬ್ಬಂದಿಯ ಮೇಲೆ  ಹಲ್ಲೆ ನಡೆಸಿ  ಖೈದಿಗಳು ಒಬ್ಬೊಬ್ಬರಾಗಿ  ಪರಾರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ  ಜೈಲು ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಮಧುರೈ(Madhurai) ಮೂಲದ ಓರ್ವ ಖೈದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ 16 ಕೈದಿಗಳ ಪತ್ತೆಗೆ 17 ವಿಶೇಷ ತನಿಖಾ ತಂಡಗಳನ್ನು ಮಾಡಲಾಗಿದೆ.

ಇಲಾಖೆ ಮಾಹಿತಿಯಂತೆ, 17 ಕೈದಿಗಳನ್ನು ಜೈಲಿನ ಒಂದೇ ಸೆಲ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ತಡರಾತ್ರಿ ಖೈದಿಯೊಬ್ಬನಿಗೆ ಪಿಟ್ಸ್ ಬಂದಿದೆ ಎಂಬಂತೆ ಆರೋಪಿಗಳು ನಾಟಕವಾಡಿದ್ದಾರೆ. ಇದನ್ನು ನಂಬಿದ ಜೈಲು ಸಿಬ್ಬಂದಿ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆ, ಎಲ್ಲಾ ಖೈ ದಿಗಳು ಸಿಬ್ಬಂದಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಖೈದಿಗಳ ಹಲ್ಲೆ ಘಟನೆಯಲ್ಲಿ ದರ್ಜೆ-2 ಪೊಲೀಸ್ ಸಿಬ್ಬಂದಿ ತಂಗಪಾಂಡಿ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಇಬ್ಬರು ಜೈಲು ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದಕ್ಷಿಣ ವಲಯ ಐಜಿಪಿ ವಿಜಯೇಂದ್ರ ಬಿದರಿ ತಿಳಿಸಿದ್ದಾರೆ.

ಪರಾರಿಯಾದ ಖೈದಿಗಳು ಗಡಿ ದಾಟದಂತೆ ತಡೆಯಲು ನೆರೆಯ ಮಧುರೈ(Madhurai), ದಿಂಡಿಗಲ್ (Dindigal) ಹಾಗೂ ಕೇರಳದ(Keral) ಇಡುಕ್ಕಿ ಜಿಲ್ಲೆಗಳ ಪೊಲೀಸರನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ. ದಿಂಡಿಗಲ್ – ಥೈನಿ ಹೆದ್ದಾರಿ(Dindigal-Thaini Highway) ಸೇರಿದಂತೆ 16 ಪ್ರಮುಖ ಕಡೆಗಳಲ್ಲಿ ತುರ್ತು ಚೆಕ್‌ಪಾಯಿಂಟ್‌ಗಳನ್ನು ಸ್ಥಾಪಿಸಿ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ದಿಂಡಿಗಲ್‌ ಎಸ್‌ಪಿ ಎಸ್.ಜಯಕುಮಾ‌ರ್ ಹೇಳಿದ್ದಾರೆ. ಖೈದಿಗಳ ಫೋಟೋಗಳನ್ನು ಎಲ್ಲಾ ಗಡಿ ಠಾಣೆಗಳಿಗೆ ರವಾನಿಸಲಾಗಿದೆ.

ಅತ್ಯಂತ ಭದ್ರತೆಯ ಉಪ ಜೈಲಿನಿಂದಲೇ(Subjail) 17 ಕೈದಿಗಳು ಪರಾರಿಯಾಗಿರುವುದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಘಟನೆ ಕುರಿತು ‘ಎಕ್ಸ್’ (X)ನಲ್ಲಿ ಕಿಡಿಕಾರಿರುವ ಡಿಎಂಕೆ ರಾಜ್ಯಸಭಾ ಸಂಸದ ಪಿ. ವಿಲ್ಸನ್, “ಕಳೆದ ವಾರಷ್ಟೇ ಪುಝಲ್ ಜೈಲಿನಿಂದ ಇಬ್ಬರು ಕೈದಿಗಳು ಪರಾರಿಯಾಗಿದ್ದರು.

 17 ಖೈದಿಗಳ ಸರಣಿ ಪರಾರಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ” ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಭದ್ರತಾ ಲೋಪಕ್ಕೆ ನೈತಿಕ ಹೊಣೆ ಹೊರಬೇಕೆಂದು ಒತ್ತಾಯ ಕೇಳಿ ಬಂದಿದೆ.